ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಬಂಟ್ವಾಳ ಮತ್ತುಸಿದ್ದಕಟ್ಟೆ ಘಟಕಗಳಿಂದ ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ನಿವೃತ್ತ ಯೋಧ ಉರುಡಂಗೆ ನಿವಾಸಿ ರಾಜೇಶ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸಿರುವ ಶೆಟ್ಟಿಗಾರ್ ಅವರು, ಚೆನ್ನೈ, ಪ್ರಧಾನಮಂತ್ರಿ ವಿಶೇಷ ಕಾರ್ಯ ಸಮೂಹ, ಜಮ್ಮು ಕಾಶ್ಮೀರದ ಫುಲುವಾಮ ಬಿಹಾರ ರಾಜ್ಯದ ಗಯಾ ಸಹಿತ ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದರು. ಎಬಿವಿಪಿ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯ್ಲ, ತಾಲೂಕು ಸಹ ಸಂಚಾಲಕರಾದ ದಿನೇಶ್ ಕೊಯ್ಲ, ನಗರ ಸಹಕಾರ್ಯದರ್ಶಿ ನಾಗರಾಜ್, ಘಟಕದ ಅಧ್ಯಕ್ಷರಾದ ಗುರುಪ್ರಸಾದ್ ಹಾಗೂ ಕಾರ್ಯಕರ್ತರಾದ ರಾಜೇಶ್, ದೀಪಕ್, ಪ್ರಜ್ವಲ್, ಕಿರಣ್, ಪ್ರದೀಪ್, ಶಿವಕುಮಾರ್ ಉಪಸ್ಥಿತರಿದ್ದರು.