ಬಂಟ್ವಾಳನ್ಯೂಸ್ ಓದುಗರನೇಕರು ಹೇಳುತ್ತಿದ್ದರು. ಎಲ್ಲ ದೃಶ್ಯ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳಲ್ಲೂ ಕೊರೊನಾದ್ದೇ ಸುದ್ದಿ. ಹೀಗಾಗಿ ಮತ್ತೆ ಅದನ್ನೇ ನಿಮ್ಮ ವೆಬ್ ಪತ್ರಿಕೆಯಲ್ಲಿ ಬಿತ್ತರಿಸಬೇಡಿ ಎಂಬ ಆಗ್ರಹ ಅವರದ್ದು. ಒಂದು ರೀತಿಯಲ್ಲಿ ಈ ವಿಷಯ ಸರಿ. ಹೀಗಾಗಿ ವಿಶೇಷ ಘಟನೆ ಏನೂ ಸಂಭವಿಸದೇ ಇದ್ದಲ್ಲಿ (ಹಾಗಾಗುವುದು ಬೇಡ) ವಾರಾಂತ್ಯಕ್ಕೆ ಒಂದು ತಿಂಗಳ ಕೊರೊನಾ ಕುರಿತ ಜಿಲ್ಲಾ ಮಾಹಿತಿಯನ್ನಷ್ಟೇ ಇಲ್ಲಿ ಕೊಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,000 ದಾಟಿದ್ದು ಜುಲೈ 4. ಪ್ರತಿ ವಾರವೂ ಸರಾಸರಿ 1 ಸಾವಿರದಷ್ಟು ಹೊಸ ಪ್ರಕರಣಗಳು ಬರುತ್ತಿದ್ದರೆ, ಅಷ್ಟೇ ಸಂಖ್ಯೆಯಲ್ಲಿ ಡಿಸ್ಚಾರ್ಜ್ ಆಗುತ್ತಿರುವುದು ಗಮನಾರ್ಹ. ವಿವರಗಳು ಇಲ್ಲಿವೆ ನೋಡಿ.
ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 26,368. ಪಾಸಿಟಿವ್ 3,311. ಜುಲೈ 18ರಂದು ಸೋಂಕಿತರು 237. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 1387.
ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 32,822. ಪಾಸಿಟಿವ್ 4,612. ಜುಲೈ 25ರಂದು ಸೋಂಕಿತರು 218. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 2127. .
ಒಂದು ವಾರದಲ್ಲಿ ಪರೀಕ್ಷೆ ನೀಡಿದವರು 6454. ಒಂದು ವಾರದಲ್ಲಿ ಪಾಸಿಟಿವ್ ಕೇಸ್ 1,301. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 740. ಕಳೆದ ವಾರಕ್ಕಿಂತ ಈ ವಾರ ಜಾಸ್ತಿ ಮಂದಿ ತಪಾಸಣೆ ಕೈಗೊಂಡಿದ್ದಾರೆ.
ಕಳೆದ 21 ದಿನಗಳಲ್ಲಿ 3,517 ಹೊಸ ಪ್ರಕರಣಗಳು ದಾಖಲಾಗಿವೆ. ಇವರ ಪೈಕಿ 1,611 ಡಿಸ್ಚಾರ್ಜ್ ಆಗಿದೆ. ಜುಲೈ 4ರಂದು ಮೃತಪಟ್ಟವರ ಸಂಖ್ಯೆ ಜಿಲ್ಲಾಡಳಿತ ನೀಡಿದ ಪಟ್ಟಿಯಂತೆ 22 ಆಗಿತ್ತು. ಆದರೆ ಇದೀಗ ಕೋವಿಡ್ ಸೋಂಕಿತರು ಮೃತಪಟ್ಟರೂ, ಮರಣದ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿ ವರದಿ ನೀಡಬೇಕಾಗಿರುವ ಕಾರಣದಿಂದಾಗಿ ಒಂದು ವಾರದಿಂದೀಚೆಗೆ ಮೃತಪಟ್ಟವರ ಒಟ್ಟು ಸಂಖ್ಯೆಯನ್ನು ಜಿಲ್ಲಾಡಳಿತ ಪ್ರಕಟಿಸುತ್ತಿಲ್ಲ. ಆದರೆ ಹೊರಡಿಸಿದ ಪಟ್ಟಿಯನ್ನು ಗಮನಿಸಿದರೆ, ಇದುವರೆಗೆ ಸುಮಾರು 115ರಷ್ಟು ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಅಂದರೆ ಈ ತಿಂಗಳಲ್ಲೇ ಸುಮಾರು 80ರಷ್ಟು ಮಂದಿ ಸಾವನ್ನಪ್ಪಿದವರಿಗೆ ಕೊರೊನಾ ಪಾಸಿಟಿವ್ ಇತ್ತು. ಶನಿವಾರ ಒಂದೇ ದಿನ 8 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಮಂಗಳೂರಿನ 6 ಗಂಡಸರು,ಓರ್ವ ಮಹಿಳೆ,ಮಂಜೇಶ್ವರದ ಓರ್ವ ಮಹಿಳೆ ಸೇರಿದ್ದಾರೆ. ಮಂಗಳೂರು ನಿವಾಸಿಗಳಾದ 67,68,69,75,78 ಹಾಗೂ 88 ವರ್ಷದ ಗಂಡಸರು,76 ವರ್ಷದ ಓರ್ವ ವೃದ್ಧ ಮಹಿಳೆ. ಕಾಸರಗೋಡಿನ ಮಂಜೇಶ್ವರ ನಿವಾಸಿ 53 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.