ಜಿಲ್ಲಾ ಸುದ್ದಿ

ಸೈನಿಕರ ನೆನಪಿಗೆ ಕಾರ್ಗಿಲ್ ವನ ನಿರ್ಮಾಣ, ಯೋಧರಿಗೆ ಗಿಡ ನೆಡುವ ಮೂಲಕ ಅಪೂರ್ವ ಕಾರ್ಯಕ್ರಮಕ್ಕೆ ಚಾಲನೆ

ಸಾಮಾನ್ಯವಾಗಿ ಒಂದಿಷ್ಟು ಸ್ವಂತ ಜಾಗ ಇದ್ದರೆ ಅದರಲ್ಲಿ   ಹಣ ಮಾಡುವಂತಹ ಬೆಳೆ ಬೆಳೆಸುವ ವ್ಯಾವಹಾರಿಕ ದೃಷ್ಟಿ ಕೋನ ಇಡುವಂತ ಮನಸುಗಳು ಸಾಕಷ್ಟಿರಬಹುದು. ಆದರೆ ತನ್ನ ಸ್ವಂತ ಒಂದು ಎಕರೆ ಗಿಂತಲೂ ಹೆಚ್ಚು ಜಾಗದಲ್ಲಿ ಒಂದು ಸುಂದರವಾದ ಹಸಿರು ವನವನ್ನು ನಿರ್ಮಾಣ ಮಾಡುವ ತನ್ನ ಬಹುಕಾಲದ ವಿಶಿಷ್ಟ ಕನಸನ್ನು ನನಸು ಮಾಡಿ ಸಾಧಿಸಿ ತೋರಿಸಿದವರು ಬೆಳ್ತಂಗಡಿ ಮುಂಡಾಜೆ ಯ ಸಚಿನ್ ಭಿಡೆ.

ಜಾಹೀರಾತು

ತಮ್ಮ 5 ಎಕರೆ ಜಾಗದಲ್ಲಿ ಕಾರ್ಗಿಲ್ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಪೂರ್ವ ಯೋಜನೆ ಹಮ್ಮಿಕೊಂಡಿದ್ದು, ನಿನ್ನೆ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಂಡಾಜೆಯ ಭಿಡೆ ಮನೆತನದ ದುಂಬೆಟ್ಟು ನಿವಾಸಿ ಸಚಿನ್ಭಿಡೆ ಕಾರ್ಗಿಲ್ವಿಜಯ ದಿನದ ನೆನಪಿಗಾಗಿ 800 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಲು ಮುಂದಾಗಿದ್ದಾರೆ. ನಾನು ಚಿಕ್ಕವನಿದ್ದಾಗ ತನ್ನ ತಂದೆ ಗಣೇಶ್ಭಿಡೆಯವರು ಕಾರ್ಗಿಲ್ಯುದ್ಧದ ಸಂದರ್ಭದಲ್ಲಿ ಯೋಧರ ಕಷ್ಟಗಳನ್ನು ವಿವರಿಸಿ, ಒಂದಿಷ್ಟು ಹಣವನ್ನು ನೀಡಿ ಕಾರ್ಗಿಲ್ನಿಧಿಗೆ ಮನಿ ಆರ್ಡರ್ಮೂಲಕ ಜಮಾ ಮಾಡಲು ಹೇಳಿರುವುದು ಕೆಲಸಕ್ಕೆ ಸ್ಫೂರ್ತಿ ಎಂದು ಹೇಳಿದ್ದಾರೆ.ಅರಣ್ಯ ಇಲಾಖೆಯ ಮುಂಡಾಜೆ ಕಾಪು ನರ್ಸರಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಗಿಡಗಳನ್ನು ಪಡೆದು ನೆಡಲಾಗುತ್ತಿದೆ. ಉದ್ದೇಶಿತ ಜಾಗಕ್ಕೆಕಾರ್ಗಿಲ್ವನಎಂದು ನಾಮಕರಣ ಮಾಡಲಾಗಿದೆ. ವೇಳೆ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣ ಭಟ್‌, ಗೌರವಾಧ್ಯಕ್ಷ ಎಂ.ವಿ. ಭಟ್‌, ಮಾಜಿ ಸೈನಿಕರಾದ ಶ್ರೀಕಾಂತ ಗೋರೆ, ಜಗನ್ನಾಥ ಶೆಟ್ಟಿ, ಸುನಿಲ್ಶೆಣೈ, ಪ್ರಸನ್ನ ಬಿ. ಶಿಶಿಲ, ರಾಮ್ಭಟ್‌, ಹರೀಶ್ರೈ, ಉಮೇಶ್ಬಂಗೇರ, ಪರಿಸರವಾದಿ ದಿನೇಶ್ಹೊಳ್ಳ, ಅವಿನಾಶ್ಭಿಡೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಗಿಲ್ ಹುತಾತ್ಮರ ( ಜೂನ್ 26 ಕಾರ್ಗಿಲ್ ಹುತಾತ್ಮರ ದಿನಾಚರಣೆ ) ಸ್ಮರಣಾರ್ಥ ತನ್ನ ತೋಟದ ಸಮೀಪದಲ್ಲೇ ಇದ್ದ ಜಾಗದಲ್ಲಿ ಕಾರ್ಗಿಲ್ ವನ ಎಂಬ ಕಾನನದ ಕನಸು ಇಂದು ಚಿಗುರೊಡೆದಿದೆ. ಈ ಜಾಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದು ಬೆಟ್ಟ ಮೇಲಿನಿಂದ ಕೆಳಗಡೆ ಕಣಿವೆ ಪ್ರದೇಶದಲ್ಲಿ ವರ್ಷ ಪೂರ್ತಿ ನೀರು ಲಭಿಸುವಂತಹ ಗಿಡ, ಮರಗಳ ಬೆಳವಣಿಗೆಗೆ ಪೂರಕವಾದ ಸ್ಥಳ. ಇದರಲ್ಲಿ ಕಮರ್ಷಿಯಲ್ ಬೆಳೆ ಬೆಳೆಸಿ ಸಚಿನ್ ಗೆ ಬೇಕಾದಷ್ಟು ಹಣ ಮಾಡಲು ಸಾಕಷ್ಟು ಅವಕಾಶಗಳು ಇತ್ತು. ಆದರೂ ತನ್ನಿಂದ ಈ ಪ್ರಕೃತಿಗೆ, ಈ ದೇಶಕ್ಕೆ ಏನಾದರೂ ಕೊಡುಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಚಿನ್ ಈ ಕಾರ್ಗಿಲ್ ವನ ನಿರ್ಮಾಣದ ಕಡೆ ಗುರಿ ಸಾಧಿಸಿದರು.

ಸೈನಿಕರಿಗೆ ಗೌರವ:

9 ಜನ  ಮಿಲಿಟರಿ ಅಧಿಕಾರಿ, ಸೈನಿಕರು ‘ ಕಾರ್ಗಿಲ್ ವನ ‘ ದ ಲ್ಲಿ ಗಿಡ ಗಳನು  ನೆಟ್ಟು ಉದ್ಘಾಟನೆ ಮಾಡಿರುತ್ತಾರೆ. ಸಚಿನ್ ರವರ ತಾಯಿಯೇ ಸೈನಿಕರಿಗೆ ಗಿಡಗಳನ್ನು ಹಸ್ತಾಂತರಿಸಿರು ವುದೂ ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಮೆರುಗು. ಮನೆಯಲ್ಲಿ ನಮ್ಮ ಹೆತ್ತ ತಾಯಿಯ ಪ್ರತೀ ರೂಪವಾಗಿ ನಮ್ಮನ್ನು ಆರೈಕೆ ಮಾಡುವ ಇನ್ನೊಂದು ತಾಯಿಯೇ ಪ್ರಕೃತಿ ತಾಯಿ. ಬೆಳ್ತಂಗಡಿ  ನಿವೃತ್ತ ಸೈನಿಕ ಸಂಘದ ಗೌರವ ಅಧ್ಯಕ್ಷರಾದ ಎಂ. ವೀ. ಭಟ್, ಅಧ್ಯಕ್ಷರಾದ ಕೃಷ್ಣ ಭಟ್, ಗಡಿ ಭದ್ರತಾ ಪಡೆಯ ಸೈನಿಕರಾಗಿ ರುವ ಜಗನ್ನಾಥ್ ಶೆಟ್ಟಿ, ಹರೀಶ್ ರೈ, ರಾಮ್ ಭಟ್, ಸುನಿಲ್ ಶೆಣೈ, ಶ್ರೀಕಾಂತ್ ಗೋರೆ, ಉಮೇಶ್ ಬಂಗೇರ, ಪ್ರಸನ್ನ ಇವರೆಲ್ಲಾ ಗಿಡಗಳನ್ನು ನೆಟ್ಟು ಕಾರ್ಗಿಲ್ ವನದ ಹಸಿರು ಹೊದಿಕೆ ಹಾಸಿರುವರು. ಸಚಿನ್ ರವರು ಯಾವುದೇ ಕಾರಣಕ್ಕೂ ಈ ವನಕ್ಕೆ ತೊಂದರೆ ಆಗದಂತೆ, ಬಾಡಿ ಹೋಗದಂತೆ , ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದಾಗ ಸೈನಿಕರು ಕೂಡಾ ವನ ಸಂರಕ್ಷಣೆ ಆಗುವಂತೆ ನಾವು ಕೂಡಾ ವನದ ಸಂಪರ್ಕ ಇಟ್ಟು ಕೊಳ್ಳುವ ಭರವಸೆ ನೀಡಿದ್ದು ಕಾಡು ಬೆಳವಣಿಗೆಗೆ ಇಟ್ಟ ಧನಾತ್ಮಕ ಪೀಠಿಕೆ.  ಇನ್ನು 4 ರಿಂದ 5 ವರ್ಷಗಳಲ್ಲಿ ಈ ಗಿಡಗಳು ಬೆಳೆದು ಒಂದು ಸುಂದರ ವನ ಆಗಿ ಈ ದೇಶ ಮತ್ತು ಪ್ರಕೃತಿಗೆ ಒಳ್ಳೆಯ ಕೊಡುಗೆ ಆಗಲಿದೆ. ಇದು ಶ್ಲಾಘನೀಯ ಮತ್ತು ಎಲ್ಲರಿಗೂ ಪ್ರೆರಣೀಯ ಎನ್ನುತ್ತಾರೆ ಪರಿಸರವಾದಿ ದಿನೇಶ್ ಹೊಳ್ಳ.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.