ಬಂಟ್ವಾಳ: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಈ ಬಾರಿ ಜುಲೈ 25ರಂದು ನಡೆಯುವ ನಾಗರಪಂಚಮಿ ಉತ್ಸವವನ್ನು ಜನರು ಗುಂಪಾಗಿ ಸೇರದಂತೆ ತಿಳಿಸಿದ್ದು, ಮನೆಯಲ್ಲಿ ಆಚರಿಸುವಂತೆ ವಿನಂತಿಸಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲೂ ಸರ್ಕಾರದ ಸೂಚನೆ ಪ್ರಕಾರ ನಾಗರಪಂಚಮಿ ಆಚರಣೆ ನಡೆಯಲಿದ್ದು, ಬಾಬ್ಬಳಿಗರ ಕಟ್ಟೆ, ನದೀ ತೀರದ ಕಟ್ಟೆಯಲ್ಲಿ ನಡೆಯುವ ಪೂಜೆ ರದ್ದುಗೊಳಿಸಲಾಗಿದೆ. ದೇವಳದ ಮೂಲನಾಗಕ್ಕೆ ಅಭಿಷೇಕ, ಪೂಜೆ ನಡೆಯಲಿದ್ದು, ಭಕ್ತರಿಗೆ ಮುಂದಿನ ಆದೇಶದವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…