ಬಂಟ್ವಾಳ, ಬಿ.ಸಿ.ರೋಡ್ ಮೊದಲಿನಂತಾಗಿದೆ. ಹೋಟೆಲ್ ಗಳು ತೆರೆದಿವೆ. ಅಂಗಡಿ ಮುಂಗಟ್ಟುಗಳು ವ್ಯಾಪಾರ ಆರಂಭಿಸಿವೆ. ಬಸ್ಸುಗಳು ಸ್ಟ್ಯಾಂಡಿಗಿಳಿದಿವೆ. ಜನರನ್ನು ಕೂಗಿ ಕರೆಯುವ ಕಂಡಕ್ಟರ್ ಗಳು, ಗ್ರಾಹಕರ ನಿರೀಕ್ಷೆಯಲ್ಲಿ ಬಟ್ಟೆಯಂಗಡಿಗಳು, ತಾಲೂಕು ಸಹಿತ ಇತರ ಕಚೇರಿಗಳಿಗೆ ಅಹವಾಲು ಕೊಂಡೊಯ್ಯುವ ಸಾರ್ವಜನಿಕರು,. ಹೀಗೆ ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದು ಒಂದು ವಾರ ಲಾಕ್ ಡೌನ್ ನಂತರ ಗುರುವಾರ ಬೆಳಗ್ಗಿನ ಸ್ಥಿತಿ. ಹಾಗೆಂದು ಕೊರೊನಾ ಹೋಯಿತೇ? ಖಂಡಿತಾ ಇಲ್ಲ. ಮಾಸ್ಕ್ ಹಾಕಿ ಸಂಚರಿಸುವವರೂ ಕೊರೊನಾ ಬಂದೀತು ಎಂಬ ಅನುಮಾನದಲ್ಲಿಯೇ ತೆರಳುತ್ತಿದ್ದಾರೆ. ಆದರೂ ಬಿ.ಸಿ.ರೋಡಿನ ವ್ಯಾಪಾರ ವಹಿವಾಟುಗಳು ಗರಿಗೆದರುತ್ತಿವೆ.