ಮುಲ್ಕಿ ಸಮೀಪದ ಕಾರ್ನಾಡು ಚರಂತಿಪೇಟೆ ಹೆದ್ದಾರಿ ರಸ್ತೆಯ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಮಹಿಳೆಯ ಅಂಗಡಿಗೆ ವ್ಯಾಪಾರಕ್ಕೆಂದು ಬಂದ ಯುವಕನೊಬ್ಬ ಮಹಿಳೆಯ ಸರ ಕಸಿದು ಪರಾರಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ ಸ್ಕೂಟರ್ ನಲ್ಲಿ ಮುಲ್ಕಿ ಕಡೆಯಿಂದ ಬಂದ 24 ವರ್ಷ ಪ್ರಾಯದ ಯುವಕನೊಬ್ಬ ಚರಂತಿಪೇಟೆ ಬಳಿಯ ಮಹಿಳೆ ಅಂಗಡಿಯ ಸ್ವಲ್ಪದೂರದಲ್ಲಿ ಸ್ಕೂಟರ್ ನಿಲ್ಲಿಸಿ ಅಂಗಡಿಗೆ ಬಂದು ಬಿಸ್ಕೆಟ್ ಬೇಕು ಎಂದು ಕೇಳಿದ್ದಾನೆ. ಮಹಿಳೆ ಬಿಸ್ಕೆಟ್ ಕೊಡಲು ಕೈ ಚಾಚಿದಾಗ ಯುವಕ ಮಹಿಳೆ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ಯುವಕ ಅಂಗಡಿಯ ಮಾರು ದೂರದಲ್ಲಿ ಸ್ಕೂಟರ್ ಚಾಲೂ ಇರಿಸಿ ಅಂಗಡಿಗೆ ಬಂದಿದ್ದು ವಾಪಸ್ ಮೂಲ್ಕಿ ಕಡೆಗೆ ಪ್ರಯಾಣಿಸಿ ಬಳಿಕ ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಹೋಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ಡಿಸಿಪಿ ಕ್ರೈಮ್ ವಿಭಾಗದ ಲಕ್ಷ್ಮಿ ಗಣೇಶ್.ಎಸಿಪಿ ಬೆಳ್ಳಿಯಪ್ಪ. ಮುಲ್ಕಿ ಇನ್ಸ್ಪೆಕ್ಟರ್ ಜಯರಾಮ ಗೌಡ. ಎಸ್ಐ ಶೀತಲ್ ಅಲಗೂರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…