ಬಂಟ್ವಾಳ

ವಿಹಿಂಪ, ಬಜರಂಗದಳ ಸದಸ್ಯರಿಂದ ಹಡೀಲು ಬಿದ್ದ ಗದ್ದೆ ವ್ಯವಸಾಯ

ಜಾಹೀರಾತು

ಹಡೀಲು ಬಿದ್ದ ಗದ್ದೆ ವ್ಯವಸಾಯ ಮಾಡುವ ಮೂಲಕ ಅಜಿಲಮೊಗರುವಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆ ಯುವಕರಿಗೆ ಪ್ರೇರಣಾದಾಯಿ ಕಾರ್ಯವನ್ನು ನಡೆಸಿತು. ಹಲವಾರು ವರ್ಷಗಳಿಂದ ಹಡೀಲು ಬಿದ್ದಿರುವ ಸರಪಾಡಿಯ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ ಪಡೆದು ಭತ್ತದ ಕೃಷಿ ಕಾರ್ಯವನ್ನು ಸಂಘಟನೆ ನಡೆಸಿದೆ. ಭತ್ತದ ಕೃಷಿ ಮಾಡಿ ಫಸಲನ್ನು ಸಮಾಜದ ಬಡವರ್ಗದ ಜನರಿಗೆ ನೀಡುವ ಉದ್ದೇಶದಿಂದ ಸಂಘಟನೆ ಮುಂದಾಗಿದೆ. ವಿಶ್ವ ಹಿಂದು ಪರಿಷತ್ತ್ ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಸದಸ್ಯರು ಈ ಕಾರ್ಯ ಮಾಡಿದರು.

ಬಡಜನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸಂಘಟನೆಯ ಪ್ರಮುಖರು ಸರಪಾಡಿಯಲ್ಲಿ ಅನೇಕ ವರ್ಷಗಳಿಂದ ಹಡೀಲು ಬಿದ್ದಿದ್ದ  ನವೀನ್ ಶಾಂತಿ ಎಂಬವರ 4 ಮುಡಿ ಹಡೀಲು ಗದ್ದೆಯನ್ನು ಉಚಿತವಾಗಿ ಪಡೆದು ನೇಜಿ ಕೃಷಿ ಮಾಡಿದರು. ಈ ಗದ್ದೆಯಲ್ಲಿ ಬರುವ ಅಕ್ಕಿ ಯನ್ನು  ಕಡುಬಡವರಿಗೆ ವಿತರಿಸುವುದು ಹಾಗೂ  ಬೈ ಹುಲ್ಲನ್ನು ಗೋಶಾಲೆಗೆ ನಿಡುದೆಂದು ತೀರ್ಮಾನಿಸಿದರು. ಜಿಲ್ಲಾ ಸ.ಸಂಚಾಲಕ್ ಗುರುರಾಜ್ ಬಂಟ್ವಾಳ್, ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಪ್ರಖಂಡ ಸಹ.ಸಂಚಾಲಕ್ ಸಂತೋಷ್ ಕುಲಾಲ್, ಪ್ರಗತಿಪರ ಕೃಷಿಕರಾದ ಪುರುಷೋತ್ತಮ ಪೂಜಾರಿ ಮಜಲು ಹಾಗೂ ಸ್ಥಳ ದಾನಿಗಳು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts