ಕೋವಿಡ್ ಹಿನ್ನೆಲೆಯಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಕಲ್ಲಡ್ಕದಲ್ಲಿರುವ ಶ್ರೀ ರಾಮಾಂಜನೇಯ ಟ್ರಸ್ಟ್ ಕಲ್ಲಡ್ಕ, ಉತ್ಸವ ಸಮಿತಿ ಮತ್ತು ಭಜನಾ ಸಮಿತಿಯ ಪ್ರಮುಖರ ಸಭೆ ನಡೆದಿದ್ದು, ಶ್ರೀರಾಮ ಮಂದಿರದ ವತಿಯಿಂದ ನಡೆಯುವ 88 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವ ಮತ್ತು 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಚರ್ಚೆ ನಡೆಯಿತು. ಈ ಬಾರಿಯ ಆಚರಣೆ ಯಾವುದೇ ಸಾರ್ವಜನಿಕ ಕಾರ್ಯಕ್ರಮವಿರದೆ ಸರಳ ರೀತಿಯಲ್ಲಿ ಆಚರಿಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್(ರಿ) ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದ್ದಾರೆ.
88 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವ:
ಆಗಸ್ಟ್ 11ರಂದು ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀರಾಮ ಮಂದಿರದಲ್ಲಿ ರಾತ್ರಿ 8 ರಿಂದ ಚಂದ್ರೋದಯದ ತನಕ ಭಜನೆ. 12ರಂದು ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ಮಕ್ಕಳ ಶ್ರೀಕೃಷ್ಣ ವೇಷಧಾರಿಗಳ ವೀಡಿಯೋಗಳ ನೇರ ಪ್ರಸಾರ ಶ್ರೀರಾಮ ಮಂದಿರದ ಫೇಸ್ ಬುಕ್ ಪೇಜ್ ನಲ್ಲಿ. (15 ಸೆಂಕೆಡ್ ನ ವೀಡಿಯೋ ಚಿತ್ರೀಕರಣ ನಡೆಸುವ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.)
45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
ಶ್ರೀರಾಮ ಮಂದಿರದಲ್ಲಿ ಆಗಸ್ಟ್ 22ರಂದು ಬೆಳಿಗ್ಗೆ 9.30 ಗಣಹೋಮ. 23ರಂದು ಮನೆ ಮನೆಗಳಲ್ಲಿ ನಡೆಯುವ ಗಣಪತಿ ಪೂಜೆ, ಅಲಂಕಾರ ಮತ್ತು ಮಂದಿರದ ವತಿಯಿಂದ ನೀಡುವ ಭಜನೆಗೆ ನೃತ್ಯಭಜನೆ ನಡೆಸಿದ ವೀಡಿಯೋದ ನೇರಪ್ರಸಾರ ಶ್ರೀರಾಮ ಮಂದಿರದ ಫೇಸ್ ಬುಕ್ ಪೇಜ್ ನಲ್ಲಿ. (15ಸೆಂಕೆಡ್ ನ ವೀಡಿಯೋ ಚಿತ್ರೀಕರಣ ನಡೆಸುವ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.)