ಬಂಟ್ವಾಳ

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ 2020ನೇ ಸಾಲಿಗೆ ಸಿಇಟಿ ಆನ್ಲೈನ್ ಅಣುಕು ಪರೀಕ್ಷೆ

 

 

ಪಿಯುಸಿ ವಿದ್ಯಾರ್ಥಿಗಳು ಲಾಕ್ಡೌನ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಇಟಿ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬ ಮಾಹಿತಿಯನ್ನು ಆನ್ಲೈನ್ ನಲ್ಲಿ ಸಿಇಟಿ ಅಣುಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ ನಿಟ್ಟಿನಲ್ಲಿ ಜುಲೈ 21 ಮತ್ತು 22ರಂದು ಕರ್ನಾಟಕ ಸಿಇಟಿ ಆನ್ ಲೈನ್ ಅಣುಕು ಪರೀಕ್ಷೆಯನ್ನು ನಡೆಸಲಿದೆ.

ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ 70 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆವಿದ್ಯಾರ್ಥಿಗಳು ಜುಲೈ 21.ರಂದು ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಭೌತಶಾಸ್ತ್ರ, ಅಪರಾಹ್ನ 2 ಗಂಟೆ ಯಿಂದ 5 ಗಂಟೆಯವರೆಗೆ ರಸಾಯನಶಾಸ್ತ್ರ, ಮತ್ತು ಜುಲೈ 22ರಂದು  ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಗಣಿತ, ಅಪರಾಹ್ನ 2 ಗಂಟೆ ಯಿಂದ 5 ಗಂಟೆಯವರೆಗೆ ಜೀವಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ. ಸಿಇಟಿ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಅಣುಕು ಪರೀಕ್ಷೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವುದಲ್ಲದೇ, ಪರೀಕ್ಷಾ ಪ್ರಶ್ನೆ ಪತ್ರಿಕೆಯ ವಿಶಿಷ್ಠತೆ ಹಾಗೂ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಂಡು, ತಮ್ಮ ತಮ್ಮ ಕಲಿಕಾ ತಯಾರಿ ಮಟ್ಟವನ್ನು ವಿಶ್ಲೇಷಿಸಿ, ತಾವು ನಡೆಸುವ ಕಲಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡು ಅಭ್ಯಾಸ ಮಾಡಬಹುದೆಂದು ತಿಳಿದುಕೊಂಡು ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಒಂದು ಉತ್ತಮ ಅವಕಾಶ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀನಿವಾಸ ಮಯ್ಯ ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ https://sitmng.ac.in/Mock-Test ಗೆ ಭೇಟಿ ನೀಡಿ ಪರೀಕ್ಷೆ ಬರೆಯಬಹುದಾಗಿದೆಹೆಚ್ಚಿನ ಮಾಹಿತಿಗಾಗಿ ಧೀರಜ್ ಹೆಬ್ರಿ ಇವರನ್ನು 8147766270 ರಲ್ಲಿ ಅಥವಾ dheeraj.h7@sitmng.ac.in ನ್ನು ಸಂಪರ್ಕಿಸಬಹುದಾಗಿದೆ.

ಬಂಟ್ವಾಳನ್ಯೂಸ್ ವಾಟ್ಸಾಪ್ ಗುಂಪು ಸೇರದೇ ಇದ್ದರೆ ಇಲ್ಲಿ ಕ್ಲಿಕ್ ಮಾಡಿರಿ

https://chat.whatsapp.com/HFlElhY4ERbFbNFcQmp0r3

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts