ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಹೆಲ್ಪ್ ಡೆಸ್ಕ್ ಆರಂಭಗೊಂಡಿದೆ. ಮಾಣಿ ಗ್ರಾಪಂಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಮತ್ತು ತಾಪಂ ಇಒ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಪಂ ಪಿಡಿಒ ನಾರಾಯಣ ಗಟ್ಟಿ ಉಪಸ್ಥಿತರಿದ್ದರು. ಕೋವಿಡ್-19 ಹೆಲ್ಪ್ ಡೆಸ್ಕ್ ಮೂಲಕ ಗ್ರಾಪಂನ ಸಿಬ್ಬಂದಿಯೋರ್ವರು ಪ್ರತಿ ದಿನ ಪಂಚಾಯಿತಿ ವ್ಯಾಪ್ತಿಯಲ್ಲಿರುವ 65 ವರ್ಷ ಪ್ರಾಯ ದಾಟಿದವರ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸುತ್ತಾರೆ. ಮಾಣಿಯಲ್ಲಿ ಶುಕ್ರವಾರ ಸುಮಾರು 25 ಮಂದಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು.ಪ್ರತೀ ದಿನ ಈ ಕಾರ್ಯ ನಡೆಯಲಿದೆ.