ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡನೇ ದಿನವಾದ ಶುಕ್ರವಾರ ಬಂಟ್ವಾಳ ಮತ್ತು ಬಿ.ಸಿ.ರೋಡ್ ಸಹಿತ ತಾಲೂಕಿನ ಹಲವೆಡೆ ಬೆಳಗಿನ ವೇಳೆ ವಾಹನ, ಜನಸಂಚಾರ ಕಂಡುಬಂತು. ಅಗತ್ಯ ವಸ್ತುಗಳ ಖರೀದಿ ನಡೆಸುವವರು, ಕೆಲಸಗಳಿಗೆ ತೆರಳುವವರು ದ್ವಿಚಕ್ರ ವಾಹನ ಮತ್ತು ಕಾರು, ವ್ಯಾನುಗಳಲ್ಲಿ ಓಡಾಡಿದರು. ಆದರೆ ಸುಮಾರು 10.30 ಆಗುವ ವೇಳೆ ಚಟುವಟಿಕೆ ಕ್ಷೀಣವಾಯಿತು. ಕೆಲ ಹೊತ್ತಿನಲ್ಲಿ ವಾಹನಗಳ ಓಡಾಟ ಕಡಿಮೆಯಾಗಿ ರಸ್ತೆಯಲ್ಲಿ ಪೊಲೀಸರಷ್ಟೇ ಕಂಡುಬಂದರು. ಕಳೆದ ಲಾಕ್ ಡೌನ್ ಗಿಂತ ಭಿನ್ನವಾಗಿ ಈ ಬಾರಿ ಜನರೇ ಸ್ವಯಂಪ್ರೇರಿತರಾಗಿ ಮಧ್ಯಾಹ್ನದ ಬಳಿಕ ರಸ್ತೆಗಿಳಿಯದೆ ಕೊರೊನಾ ವಿರುದ್ಧದ ಸರ್ಕಾರದ ಕ್ರಮಗಳನ್ನು ಅನುಸರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…