ಕಠಿಣ ಪರಿಶ್ರಮವೇ ಸಾಧನೆಗೆ ಪ್ರೇರಣೆ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು .
ಸೂರಿಕುಮೇರು ಬೊರಿಮಾರ್ ಸೈಂಟ್ ಜೋಸೆಫ್ ಚರ್ಚ್ ನ ಆಶ್ರಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕಪಡೆದ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯರಾದ ಅಲಿಸಿಯಾ ಲೀಮಾ ಪಿರೇರಾ(ವಾಣಿಜ್ಯ97.3) ಹಾಗೂ ಮೆಲಿಟಾ ಪಾಯ್ಸ್ (ವಿಜ್ಞಾನ 95.16) ರನ್ನು ಅಭಿನಂದಿಸಿ ಅವರು ಮಾತನಾಡಿದರು.
ನಮ್ಮ ಚರ್ಚ್ ವ್ಯಾಪ್ತಿಯ ಈ ಇಬ್ಬರು ವಿದ್ಯಾರ್ಥಿನಿಯರ ಸಾಧನೆ ನಮ್ಮ ಚರ್ಚ್ ಗೂ ಕೀರ್ತಿಯನ್ನು ತಂದಿದೆ, ಚರ್ಚ್ ನ ವೈಸಿಎಸ್ ಘಟಕದ ಅಧ್ಯಕ್ಷ,ಪದಾಧಿಕಾರಿಗಳ ಹುದ್ದೆಯನ್ನೂ ಇಬ್ಬರು ವಿದ್ಯಾರ್ಥಿನಿಯರು ಸೇವಾ ಮನೋಭಾವನೆಯಿಂದ ನಿರ್ವಹಿಸುತ್ತಿದ್ದು, ಇವರ ಶ್ರಮಕ್ಕೆ ಸಿಕ್ಕ ಗೌರವ ಇದಾಗಿದೆ ಎಂದು ಫಾದರ್ ಗ್ರೆಗರಿ ಹೇಳಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಶುಭಾಹಾರೈಸಿದರು. ವಿದ್ಯಾರ್ಥಿನಿ ಅಲಿಸಿಯಾ ಳ ತಂದೆ ಅವಿಲ್ ಹಾಗೂ ತಾಯಿ ಲೀಡಿಯಾ ಪಿರೇರಾ, ವಿದ್ಯಾರ್ಥಿನಿ ಮೆಲಿಟಾ ತಂದೆ ಮಾರ್ಸೆಲ್ , ತಾಯಿ ಲೀನಾ ಪಾಯ್ಸ್ ಮಕ್ಕಳ ಸಾಧನೆ ಕುರಿತು ಹೆಮ್ಮೆ ಇದೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ರವರೂ ಕೂಡ ನಮ್ಮ ಮಕ್ಕಳಿಗೆ ದೂರವಾಣಿ ಮೂಲಕ ಅಭಿನಂದಿಸಿ ಶುಭಹಾರೈಸಿರುವುದು ಖುಷಿ ಕೊಟ್ಟಿದೆ ಎಂದರು. ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಮೇರಿ ಡಿ’ಸೋಜ, ಸೂರಿಕುಮೇರು ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯಶಿಕ್ಷಕಿ ಸಿಸ್ಟರ್ ಲೊವಿಟಾ, ಸ್ಟೀವನ್ ಪಾಯ್ಸ್, ಅನಿತಾ ರೋಶನ್ ಮಾರ್ಟಿಸ್ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…