ಸಾಧಕರು

ಅಮ್ಮ ಎತ್ತಿಕೊಂಡು ಬರುತ್ತಿದ್ದರೆ, ವೀಲ್ ಚೇರ್ ನಲ್ಲಿ ಕುಳಿತು ಪಾಠ ಕೇಳಿದ್ದ ಭಾಗ್ಯಶ್ರೀ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಾಧಕಿ

  • ಯಾದವ ಕುಲಾಲ್, ಬಿ.ಸಿ.ರೋಡ್

ಒಂದು ಕಡೆ ಬಡತನ, ಮತ್ತೊಂದು ಕಡೆ ಅಂಗ ವೈಕಲ್ಯ ಇವೆಲ್ಲವನ್ನೂ ಮೀರಿ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.

ಜಾಹೀರಾತು

ಜಾಹೀರಾತು

ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಪುತ್ರಿ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಆದರೂ  ಜೀವನಾಧಾರಕ್ಕೆ ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ.

ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಕಿರಿಯ ಮಗಳು ಭಾಗ್ಯಶ್ರೀ ಈ ಸಾಧಕಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ. ತಾಯಿ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದು ಮಗಳನ್ನು ಎತ್ತಿಕೊಂಡು ಬಂದೇ ಕಾಲೇಜಿಗೆ ಬಿಡುತ್ತಿದ್ದರು. ಅಲ್ಲಿ ವೀಲ್ ಚೇರ್‌ನಲ್ಲಿಯೇ ಇವಳ ಕಲಿಕೆ ಸಾಗುತ್ತಿತ್ತು. ಅವಳ ಸ್ನೇಹಿತೆಯರು ಕೂಡಾ ಬಿಡುವಿನ ಹೊತ್ತಿನಲ್ಲಿ ಇವಳನ್ನು ವೀಲ್ ಚೇರ್‌ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದುದು ಎಲ್ಲರೂ ಅವಳನ್ನು ಪ್ರೀತಿಸುವವರೇ ಆಗಿದ್ದರು. ತಾನು ಇನ್ನೊಬ್ಬರ ಮೇಲೆ ಅವಲಂಬಿತಳಾಗಬಾರದು ಎನ್ನುವ ಕಾರಣಕ್ಕಾಗಿ ಎರಡು ಮರದ ತುಂಡನ್ನು ಹಿಡಿದುಕೊಂಡು ಒಂದು ಫ್ಲೋರ್‌ನಿಂದ ಇನ್ನೊಂದು ಫ್ಳೋರ್‌ಗೆ ಹತ್ತಿ ಇಳಿಯುತ್ತಿದ್ದುದನ್ನು ನೋಡಿದಾಗ ಎಲ್ಲರ ಕರುಳ್ ಚುರಕ್ ಎನ್ನುತ್ತಿತ್ತು. ಇಂಥ ಅಂಗವೈಕಲ್ಯ ಇದ್ದರೂ ಅವಳ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ವಾಣಿಜ್ಯ ವಿಭಾಗದಲ್ಲಿ 476 ಅಂಕಗಳನ್ನು ಪಡೆದಿರುವುದು ಸಣ್ಣ ಸಾಧನೆ ಏನಲ್ಲ.

ನನ್ನ 12 ವರ್ಷಗಳ ವಿದ್ಯಾಭ್ಯಾಸದಲ್ಲಿಯೂ ನನ್ನ ಬೆನ್ನೆಲುಬಾಗಿ, ನನ್ನನ್ನು ಎತ್ತಿಕೊಂಡೇ ಬಂದು ಅಮ್ಮ ಸಹಾಯ ಮಾಡಿದ್ದಾರೆ. ಅವರಿಂದಾಗಿ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿಯೇ ಇದ್ದು ದೂರಶಿಕ್ಷಣದಲ್ಲಿ ಬಿ.ಕಾಂ. ಕಲಿಯಬೇಕೆಂಬ ಆಸೆ ನನ್ನದು. ನನ್ನ ಸ್ನೇಹಿತರು, ಉಪನ್ಯಾಸಕರು ನನಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎನ್ನುತ್ತಾಳೆ ಭಾಗ್ಯಶ್ರೀ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ