ಬಂಟ್ವಾಳದಲ್ಲಿ ಶನಿವಾರ ಬೆಳಗ್ಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಸುಭಾಷ್ ನಗರ ನಿವಾಸಿಯಾಗಿರುವ ಮಹಿಳೆ, ಬಿಸಿರೋಡಿನ ಚಿಕ್ಕಯ್ಯಮಠ ಎಂಬಲ್ಲಿ ತನ್ನ ಅಕ್ಕನ ಮನೆಗೆ ಬಂದಿದ್ದರು. ಬೆಳಗ್ಗೆ ಸುಮಾರು 5 ಗಂಟೆಯ ಬಳಿಕ ಅವರು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇತ್ರಾವತಿ ಸೇತುವೆಯಿಂದ ಕೆಳಗೆ ಹಾರಿರಲೂಬಹುದು ಎಂಬ ಶಂಕೆಯಿಂದ ಬಂಟ್ವಾಳ ಪೊಲೀಸರು ಮುಳುಗುತಜ್ಞರ ಸಹಾಯದಿಂದ ನದಿಯಲ್ಲೂ ಹುಡುಕಾಟ ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…