ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಪೆರುವಾಯಿ ಎಂಬಲ್ಲಿ ಬಾರ್ ಒಂದಕ್ಕೆ ನುಗ್ಗಿ ಮದ್ಯದ ಬಾಟಲಿಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಎಸ್.ಐ ನೇತೃತ್ವದ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ. ಮಾಣಿಲ ನಿವಾಸಿ ವಿಜಯಕುಮಾರ್ ಕ್ರಾಸ್ತ(40), ಗಣೇಶ್ ನಾಯ್ಕ(34), ಪೆರುವಾಯಿ ನಿವಾಸಿ ಸುರೇಶ್ ನಾಯ್ಕ (32) ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 7ರಂದು ರಾತ್ರಿಯಿಂದ 8ರ ಬೆಳಗ್ಗೆ ನಡುವೆ ಬಾರ್ ನ ಹಿಂಬದಿಯ ಬಾಗಿಲು ಹಾಗೂ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 50 ಸಾವಿರ ಮೌಲ್ಯದ ಮದ್ಯವನ್ನು ಕಳವುಗೈದಿದ್ದರು. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ, ತನಿಖೆಯನ್ನು ಕೈಗೊಂಡ ಸಂದರ್ಭದಲ್ಲಿ ಆರೋಪಿಗಳ ಪತ್ತೆಯಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…