ಪ್ರಮುಖ ಸುದ್ದಿಗಳು

KARNATAKA COVID19 UPDATE: ಇಂದು 57 ಸಾವು, 2313 ಮಂದಿಗೆ ಸೋಂಕು. 1003 ಮಂದಿ ಗುಣಮುಖ

READ HERE FOR COMPLETE DETAILS

ಜಾಹೀರಾತು

 

ಕರ್ನಾಟಕ ರಾಜ್ಯದಲ್ಲಿ ಇಂದು 2313 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಂದು 57 ಮಂದಿ ಸಾವನ್ನಪ್ಪಿದ್ದು, 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 33,418 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರ ಪೈಕಿ 19,035 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 13,836 ಮಂದಿ ಗುಣಮುಖರಾಗಿದ್ದು, ಅವರಲ್ಲಿ ಇಂದು ಒಂದೇ ದಿನ 1003 ಮಂದಿ ಗುಣಮುಖರಾಗಿರುವುದು ವಿಶೇಷ.

ಎಂದಿನಂತೆಯೇ ಬೆಂಗಳೂರು ನಗರದಲ್ಲಿ ಗರಿಷ್ಠ ಸಂಖ್ಯೆಯ ಕೊರೊನಾ ಪೇಷಂಟ್ ಗಳಿದ್ದರೆ, ಅದರ ನಂತರದ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ. ಬೆಂಗಳೂರು ನಗರದಲ್ಲಿ ಒಟ್ಟು 1447 ಹೊಸ ಕೇಸ್ ಸೇರಿ, 15,329 ಮಂದಿಗೆ ಸೋಂಕು ತಗಲಿದ್ದರೆ, ಇಂದು 601 ಮಂದಿ ಸೇರಿ 3435 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.  ಆದರೆ 206 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಬೆಂಗಳೂರಿನಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 11,687.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಮಂದಿಗೆ ಇಂದು ಸೋಂಕು ತಗಲಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 1840 ಆಗಿದೆ. ಇಂದು 46 ಮಂದಿ ಸೇರಿ ಒಟ್ಟು 732 ಮಂದಿ ಬಿಡುಗಡೆಯಾಗಿದ್ದರೆ, ಒಟ್ಟು 31 ಸಾವಾಗಿದೆ ಎಂದು ರಾಜ್ಯ ಬುಲೆಟಿನ್ ಹೇಳಿದೆ. ಅದರ ಪ್ರಕಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1075.

ಒಂದೊಮ್ಮೆ ಕೊರೊನಾ ಸೋಂಕಿತರು ದಿಢೀರ್ ಹೆಚ್ಚಳವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು 34 ಮಂದಿಗೆ ಸೋಂಕು ತಗಲಿದರೂ ಅಲ್ಲಿ ಕೇವಲ 260  ಸಕ್ರಿಯ ಪ್ರಕರಣಗಳಿವೆ. ಅದನ್ನು ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಲ್ಲಿ ದಿನೇ ದಿನೇ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ನೆರೆಯ ಕಾಸರಗೋಡು ಜಿಲ್ಲೆಯಲ್ಲೂ 17 ಹೊಸ ಪ್ರಕರಣಗಳು ಬಂದಿವೆ.

 DAKSHINA KANNADA DISTRICT: ಪ್ರತಿ ಬಾರಿಯೂ ಕೊರೊನಾ ಪ್ರಕರಣಗಳು ಬಂದಾಗಲೆಲ್ಲಾ ಗುಣವಾದವರ ಸಂಖ್ಯೆಯನ್ನು ಗಮನಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1848. ಗುಣಮುಖರಾದವರು 753. ಚಿಕಿತ್ಸೆ ಪಡೆಯುತ್ತಿರುವವರು 1057 ಮಂದಿ. ಒಟ್ಟು 22,585 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 20,737 ಮಂದಿಗೆ ಕೊರೊನಾ ಸೋಂಕು ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ ಪ್ರಕಟಣೆಯ ಪ್ರಕಾರ, ಇಂದು 139 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 8 ಮಂದಿ ಸಾವಿಗೀಡಾಗಿದ್ದು, ಸಾವಿನ ಕಾರಣ ನಿರ್ಧರಿಸಲು ಜಿಲ್ಲಾ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದಿದೆ. ಕೊರೊನಾಕ್ಕೆ ಸಂಬಂಧಿಸಿ, ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 24 ಪ್ರಕರಣಗಳು ದೃಢಪಟ್ಟಿವೆ. ಪುದು ಗ್ರಾಮವೊಂದರಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಮಕ್ಕಳು, ವಯಸ್ಸಾದವರು ಇದ್ದಾರೆ.

ಜಿಲ್ಲೆಯಲ್ಲಿ ಇಂದು  7 ಗಂಡಸರು ಮತ್ತು ಓರ್ವ ಮಹಿಳೆ ಕೊರೋನಾಗೆ ಬಲಿಯಾಗಿದ್ದಾಗಿ ಹೇಳಿರುವ ವರದಿಯಲ್ಲಿ, 35, 48, 55, 57, 65, 67, 68 ವರ್ಷದ ಪುರುಷರು ಮತ್ತು 58 ವರ್ಷದ ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಅದರನ್ವಯ ದ.ಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿಕೆಯಾದಂತಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.