ಪ್ರತಿ ಬಾರಿಯೂ ಕೊರೊನಾ ಪ್ರಕರಣಗಳು ಬಂದಾಗಲೆಲ್ಲಾ ಗುಣವಾದವರ ಸಂಖ್ಯೆಯನ್ನು ಗಮನಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1848. ಗುಣಮುಖರಾದವರು 753. ಚಿಕಿತ್ಸೆ ಪಡೆಯುತ್ತಿರುವವರು 1057 ಮಂದಿ. ಒಟ್ಟು 22,585 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 20,737 ಮಂದಿಗೆ ಕೊರೊನಾ ಸೋಂಕು ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ ಪ್ರಕಟಣೆಯ ಪ್ರಕಾರ, ಇಂದು 139 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 8 ಮಂದಿ ಸಾವಿಗೀಡಾಗಿದ್ದು, ಸಾವಿನ ಕಾರಣ ನಿರ್ಧರಿಸಲು ಜಿಲ್ಲಾ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದಿದೆ.