ಕೊರೊನಾ ಸೋಂಕು ದೃಢಪಟ್ಟು ಬಿ.ಸಿ.ರೋಡಿನ ಮೂವರು ವೈದ್ಯರು ಸೇರಿದಂತೆ ಒಂದೇ ಕುಟುಂಬದ ಐವರು ಕಳೆದ ವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು, ಅವರೀಗ ಮನೆಗೆ ಮರಳಿದ್ದು, ಭಯ ಬೇಡ ಎಚ್ಚರವಿರಲಿ ಎಂಬ ಸಂದೇಶ ನೀಡಿದ್ದಾರೆ. ಬಿ.ಸಿ.ರೋಡಿನ ಕೈಕಂಬ ಸಮೀಪದ ಮನೆಯೊಂದರಲ್ಲಿ ಖಾಸಗಿ ಪ್ರಾಕ್ಟೀಸ್ ನಡೆಸುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗಲಿತ್ತು. ಬಳಿಕ ಅವರ ತಂದೆ, ತಾಯಿ, ಪತ್ನಿ, ಮಗನಿಗೂ ಸೋಂಕು ದೃಢಪಟ್ಟಿತ್ತು. ರೋಗಲಕ್ಷಣವಿಲ್ಲದಿದ್ದರೂ ಸೋಂಕು ದೃಢಪಟ್ಟಿದ್ದ ಕಾರಣ ಅವರೆಲ್ಲರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಯಾವುದೇ ತೊಂದರೆ ಇಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ನಿನ್ನೆ ಮರಳಿದ್ದೇವೆ. ವಯಸ್ಸಾದವರಿಗೂ ಯಾವುದೇ ರೋಗಲಕ್ಷಣ ಇಲ್ಲದಿದ್ದರೆ ಬೇಗನೆ ಗುಣವಾಗುತ್ತದೆ, ಕೊರೊನಾ ಕುರಿತು ಭಯ ಬೇಡ ಆದರೆ ಎಚ್ಚರ ಖಂಡಿತಾ ಇರಬೇಕು ಎಂದವರು ಹೇಳಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…