ಮೀಟರ್ ರೀಡಿಂಗ್‌ನ ಗುತ್ತಿಗೆಯನ್ನು ಅತಿ ಕಡಿಮೆ ದರಕ್ಕೆ ನೀಡಿ ಮೆಸ್ಕಾಂ ಮೀಟರ್ ರೀಡರ್‌ಗಳನ್ನು ಮೆಸ್ಕಾಂ ಕಡಿಮೆ ವೇತನಕ್ಕೆ ದುಡಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಹಾಗೂ ಮೀಟರ್ ರೀಡರ್‌ಗಳು ತಡೆ ಹಿಡಿದಿರುವ ವೇತನ ಬಿಡುಗಡೆಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಮೀಟರ್ ರೀಡರ್‌ಗಳು ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿ ನಮ್ಮ ಬೇಡಿಕೆ ಈಡೇರುವವರೆಗೆ ಮೀಟರ್ ರೀಡಿಂಗ್ ಮೆಷಿನನ್ನು ಮೆಸ್ಕಾಂಗೆ ನೀಡುವುದಿಲ್ಲ, ಮುಂದೆ ಬೇಡಿಕೆ ಈಡೇರದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ಇಇ ಅವರ ಮೂಲಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಮುಖರಾದ ಗೋಪಾಲ ನೇರಳಕಟ್ಟೆ, ಜಯರಾಮ್ ಬಂಟ್ವಾಳ, ಗೋಪಾಲಕೃಷ್ಣ ಬಂಟ್ವಾಳ, ಸದಾಶಿವ ಬಂಟ್ವಾಳ, ಮೋನಪ್ಪ ಬೆಳ್ತಂಗಡಿ, ರಮೇಶ್ ಬೆಳ್ತಂಗಡಿ, ಉದಯಕುಮಾರ್ ವಿಟ್ಲ ಪಾಲ್ಗೊಂಡಿದ್ದರು.