1 ವರ್ಷದ ಮಗುವಿನ ಸಹಿತ ಬಂಟ್ವಾಳ ತಾಲೂಕಿನಲ್ಲಿ ಒಂದೇ ದಿನ ಒಟ್ಟು 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವುಗಳ ಪೈಕಿ ಬಂಟ್ವಾಳ ಕಸ್ಬಾ ಗ್ರಾಮದಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಂದೇ ಕುಟುಂಬದ 9 ಮಂದಿ ಸೇರಿದ್ದಾರೆ. ಪುದು ಗ್ರಾಮದಲ್ಲಿ 5 ಪ್ರಕರಣಗಳು ಕಂಡುಬಂದಿರುವುದು ಆತಂಕಕಾರಿಯಾಗಿದೆ. ಇದೀಗ ಬಂಟ್ವಾಳ ತಾಲೂಕಿನ ಮೂಲೆ ಮೂಲೆಗಳಲ್ಲೂ ಸೋಂಕು ಇರುವುದು ಖಚಿತವಾಗಿದ್ದು, ಇಂದು 1 ವರ್ಷದ ಗಂಡುಮಗು, 11, 13, 17 ವರ್ಷದ ಬಾಲಕರು ಹಾಗೂ 74, 78 ವರ್ಷದ ವೃದ್ಧರು ಸೇರಿದ್ದಾರೆ.