ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪನಾ ದಿನವನ್ನು “ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಗಿ ಎಲ್ಲೆಡೆ ಆಚರಿಸಲಾಗುತ್ತಿದ್ದು, ಇದರಂಗವಾಗಿ ಸಿದ್ದಕಟ್ಟೆ ಎಬಿವಿಪಿ ಘಟಕದಿಂದ ಸಿದ್ದಕಟ್ಟೆ ಸಂಗಬೆಟ್ಟು ಪರಿಸರದಲ್ಲಿ ಗಿಡ ನೆಡಲಾಯಿತು. ಅಭಾವಿಪ ಬಂಟ್ವಾಳದ ತಾಲೂಕು ಸಹ ಸಂಚಾಲಕ್ ದಿನೇಶ್ ಕೊಯ್ಲ, ನಗರ ಸಹ ಕಾರ್ಯದರ್ಶಿ ತಿಲಕ್, ಸಿದ್ದಕಟ್ಟೆ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ಕಾರ್ಯಕರ್ತರಾದ ಕಿರಣ್, ಮನೀಶ್, ಸೂರಜ್, ದೀಪಕ್, ಅರುಣ್, ಶಿವಕುಮಾರ್ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…