CORONA UPDATES:
ಇದು ಭಾರತ, ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇವತ್ತಿನ ಸ್ಥಿತಿ. ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾದಿಂದಾಗಿ 54 ಮಂದಿ ಸಾವನ್ನಪ್ಪಿದ್ದರೆ, ಹೊಸ 2062 ಪ್ರಕರಣಗಳು ದಾಖಲಾಗಿವೆ. ಇಂದು 778 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ 11,876. ರಾಜ್ಯದಲ್ಲಿ ಒಟ್ಟು 16,527 ಸಕ್ರಿಯ ಪ್ರಕರಣಗಳು ಇದ್ದರೆ, ಇಂದು 54 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 470ಕ್ಕೇರಿದೆ. ರಾಜ್ಯದಲ್ಲಿ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 28,877 ಆಗಿದೆ. ಐಸಿಯುನಲ್ಲಿ 452 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್, ಪಾಲಿಕೆ ಸಿಬ್ಬಂದಿ, ಸಿಐಎಸ್ಎಫ್ ಪೊಲೀಸರು, ಸಿಸಿಬಿ ಪೊಲೀಸ್ ಸೇರಿದಂತೆ 183 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. 7 ದಿನದ ಮಗು, 1 ವರ್ಷ, 4 ವರ್ಷ, 5 ವರ್ಷ ಮತ್ತು 3 ವರ್ಷದ ಇಬ್ಬರು ಸೇರಿದಂತೆ 183 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಂದು 12 ಮಂದಿ ಗುಣಮುಖರಾಗಿದ್ದು, ಮನೆಗೆ ಕಳುಹಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1542 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. 695 ಮಂದಿ ಗುಣಮುಖರಾಗಿದ್ದು, 819 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಇಬ್ಬರು ಸಾವನ್ನಪ್ಪಿರುವುದಾಗಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳೂರು ನಿವಾಸಿ 57 ವರ್ಷದ ಮಹಿಳೆ ಮತ್ತು ಪುತ್ತೂರು ನಿವಾಸಿ 32 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಇದುವರೆಗೆ 22,181 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆದಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 20,89,649 ಆಗಿದೆ. ಜಿಲ್ಲಾಡಳಿತದ ಪ್ರಕಾರ, ಜನಸಂಖ್ಯೆಯನ್ನು ಆಧರಿಸಿ 0.073 ಶೇಕಡಾ ಜನರಿಗೆ ಕೊರೊನಾ ಬಾಧಿಸಿದೆ. ಆದರೆ ತಪಾಸಣೆ ನಡೆಸಿದ್ದು ಕೇವಲ 22,181 ಮಂದಿಯನ್ನು.