ಬಂಟ್ವಾಳ ತಾಲೂಕಿನಲ್ಲಿ 9 ಪ್ರಕರಣಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 147 ಮಂದಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 35 ಮಂದಿಗೆ ಇತರೆ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿ ಬಂದರೆ, 48 ಮಂದಿ ರ್ಯಾಂಡಮ್ ಪರೀಕ್ಷೆ ಮೂಲಕ ದೃಢಪಟ್ಟವುಗಳು. ಐ.ಎಲ್.ಐ.ನಿಂದ 40, ಉಸಿರಾಟ ತೊಂದರೆಯಿಂದ 2, ಅಂತಾರಾಷ್ಟ್ರೀಯ ಪ್ರಯಾಣ, ಅಂತಾರಾಜ್ಯ ಪ್ರಯಾಣದಿಂದ 15 ಮಂದಿಗೆ ಸೋಂಕು ದೃಢಪಟ್ಟಿದೆ.
ಇಂದು 378 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಲಭ್ಯವಾಗಿದ್ದರೆ, 576 ಮಂದಿಯ ಪರೀಕ್ಷಾ ವರದಿ ದೊರಕಲು ಇನ್ನೂ ಬಾಕಿ ಇದೆ. ಒಟ್ಟು 22 ಮಂದಿ ಇದುವರೆಗೆ ಸಾವನ್ನಪ್ಪಿದ್ದು, 666 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 1242 ಮಂದಿ ಕೋವಿಡ್ ನಿಂದ ಬಾಧಿತರಾಗಿದ್ದು, ಅವರಲ್ಲಿ 10 ಮಂದಿ ಹೊರರಾಜ್ಯ, ಜಿಲ್ಲೆಯವರು. ಇದುವರೆಗೆ 20,084 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿಯಲ್ಲಿ 1242 ಮಂದಿಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಐಸಿಯುನಲ್ಲಿ 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.