ಸಾರ್ವಜನಿಕರು ಮನೆಯಿಂದ ಹೊರಹೋಗುವಾಗ ಮಾಸ್ಕ್ ಕಡ್ಡಾಯ ಮತ್ತು ಅಂತರ ಕಾಪಾಡುವುದು ಅಗತ್ಯ. 60 ವರ್ಷ ಮೇಲ್ಪಟ್ಟವರು ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಜಾಗ್ರತೆಯನ್ನು ವಹಿಸತಕ್ಕದ್ದು. ಆದಷ್ಟು ಮನೆಯಲ್ಲೇ ಇದ್ದು, ಮನೆಯ ಸದಸ್ಯರನ್ನು ಒಳಗೊಂಡಂತೆ ಇತರರೊಂದಿಗೆ ಕಡ್ಡಾಯವಾದ ಅಂತರವನ್ನು ಕಾಯ್ದುಕೊಳ್ಳಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೋರಿದ್ದಾರೆ.