ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 97 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 3 ಸೌದಿ, ದುಬಾಯಿನಿಂದ ಬಂದವರು. 28 ಐಎಲ್ ಐ, 25 ಪ್ರಾಥಮಿಕ ಸಂಪರ್ಕದವರಾಗಿದ್ದರೆ, ಉಳಿದವರಿಗೆ ಸೋಂಕು ಹೇಗೆ ಬಂತು ಎಂಬುದು ಇನ್ನೂ ಗೊತ್ತಾಗಿಲ್ಲ. ಇಂದು 26 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 3 ಮಂದಿ ಐಸಿಯುನಿಂದ ವಾರ್ಡ್ ಗೆ ಸ್ಥಳಾಂತರಗೊಂಡಿದ್ದಾರೆ. 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಡಿಕೇರಿ ಮೂಲಕ 47 ವರ್ಷದ ಪುರುಷನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ.
ಇಂದು ಎಷ್ಟು ಪರೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದೊರಕಿದ ರಿಪೋರ್ಟುಗಳು 425. ಅವುಗಳಲ್ಲಿ 97 ಪಾಸಿಟಿವ್, 328 ನೆಗೆಟಿವ್. ಇನ್ನೂ 427 ಮಂದಿಯ ರಿಪೋರ್ಟ್ ಬರಲು ಬಾಕಿ ಇದೆ. ಒಟ್ಟು 280 ಮಂದಿಯ ಸ್ಯಾಂಪಲ್ ಗಳನ್ನು ಇಂದು ಲ್ಯಾಬ್ ಗೆ ಕಳಿಸಲಾಗಿದೆ.
ಒಟ್ಟು 14,710 ಮಂದಿಯ ಗಂಟಲು ದ್ರವ ಮಾದರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದ್ದು, ಅವುಗಳ ಪೈಕಿ 14,428 ಮಂದಿಯ ರಿಪೋರ್ಟ್ ಬಂದಿದೆ. ಇವುಗಳ ಪೈಕಿ 1020 ಮಂದಿ ಪಾಸಿಟಿವ್ ಎಂದು ದೃಢಪಟ್ಟಿದ್ದು, ಅವುಗಳ ಪೈಕಿ 10 ಹೊರಜಿಲ್ಲೆ, ರಾಜ್ಯದವರು. ಇದೀಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 498. ಮೃತಪಟ್ಟವರು 19. ಬಿಡುಗಡೆ ಹೊಂದಿದವರು 503.