ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 1,502 ಹೊಸ ಕೇಸ್ ಪತ್ತೆಯಾಗಿವೆ. 19 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೋವಿಡ್-19 ಸೋಂಕಿತ ಸಂಖ್ಯೆ 18,016 ಹಾಗೂ ಸಾವಿನ ಸಂಖ್ಯೆ 272 ಆಗಿದೆ. ಬೆಂಗಳೂರಿನಲ್ಲೇ ಇಂದು ಒಂದೇ ದಿನ 889 ಜನರಲ್ಲಿ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಂತೂ ಧಾರಾಕಾರ ಮಳೆಯ ಜೊತೆ ಕೊರೊನಾ ಸುನಾಮಿ.
www.bantwalnews.com Editor: Harish Mambady
ರಾಜ್ಯದ ಸ್ಥಿತಿ ಹೀಗಿದೆ: ಒಟ್ಟು ಸಕ್ರಿಯ ಪ್ರಕರಣಗಳು 9406. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 8334. ಒಟ್ಟು ಕೊರೊನಾ ಸೋಂಕಿತರು 18,016. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 271. ಇಂದಿನ ಹೊಸ ಪ್ರಕರಣಗಳು 1502. ಇಂದು ಮೃತಪಟ್ಟವರು 19. ಒಟ್ಟು ಮೃತಪಟ್ಟವರು 272. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 161.
ಬೆಂಗಳೂರಿನಲ್ಲೇ ಇಂದು 889 ಮಂದಿಗೆ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 6179ಕ್ಕೇರಿದೆ. ಇವರಲ್ಲಿ 5505 ಸಕ್ರಿಯ ಪ್ರಕರಣಗಳೇ ಇದ್ದು, 100 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದು, ಇಂದು 90 ಪ್ರಕರಣಗಳೊಂದಿಗೆ 915 ಪ್ರಕರಣಳಾದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 90 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 14,430 ಮಂದಿಯ ಪರೀಕ್ಷೆಯನ್ನು ಇದುವರೆಗೆ ಮಾಡಲಾಗಿದ್ದು, ಅವುಗಳ ಪೈಕಿ 14003 ಮಂದಿಯ ಪರೀಕ್ಷಾ ಫಲಿತಾಂಶ ಬಂದಿದೆ. ಅವುಗಳಲ್ಲಿ 13080 ನೆಗೆಟಿವ್ ಆಗಿದ್ದರೆ, 923 ಪಾಸಿಟಿವ್ ಆಗಿದೆ. ಇವುಗಳ ಪೈಕಿ 10 ಮಂದಿ ಹೊರರಾಜ್ಯ, ಜಿಲ್ಲೆಯವರು. ಇಂದು 90 ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 18 ಮಂದಿ ಕೊರೊನಾದಿಂದ ದ.ಕ.ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. 428 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 477 ಮಂದಿ ಡಿಸ್ಚಾರ್ಜ್ ಹೊಂದಿದ್ದಾರೆ. ಇಂದು 293 ಮಂದಿಯ ಸ್ಯಾಂಪಲ್ ಕಳಿಸಲಾಗಿದೆ. 130 ಮಂದಿಯ ಲ್ಯಾಬ್ ರಿಪೋರ್ಟ್ ಇವತ್ತು ಬಂದಿದೆ. ವಿಶೇಷವೆಂದರೆ ಇಂದೂ ಬಂದ ಫಲಿತಾಂಶದಲ್ಲಿ ನೆಗೆಟಿವ್ ಗಿಂತ ಪಾಸಿಟಿವ್ ಗಳೇ ಜಾಸ್ತಿ. ಇಂದು ಕಳಿಸಿದ್ದು ಸೇರಿ 427 ಮಂದಿಯ ಸ್ಯಾಂಪಲ್ ವರದಿ ಬರಲು ಬಾಕಿ ಇದೆ ಇಂದು 33 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು 4 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಸುಮಾರು 48 ವರ್ಷದ ಪುರುಷ ಜೂನ್ 27ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಜುಲೈ 1ರಂದು ಸಾವನ್ನಪ್ಪಿದ್ದಾರೆ. ಇವರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.
ಇಂದು ಕೊರೊನಾ ಪಾಸಿಟಿವ್ ಬಂದ 90 ಮಂದಿಯ ಪೈಕಿ 15 ಕುವೈಟ್, ಸೌದಿ ದುಬೈನಿಂದ ಆಗಮಿಸಿದವರು. 19 ಐಎಲ್ ಐ, 8 ಎಸ್.ಎ.ಆರ್.ಐ. ಉಳಿದವರ ಗುರುತು ಪತ್ತೆ ಹಚ್ಚಲಾಗುತ್ತಿದೆ, 31 ಮಂದಿ ಪ್ರಾಥಮಿಕ ಸಂಪರ್ಕದವರು.
ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೋರ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಖುದ್ದು ಶಾಸಕರೇ ಅವರ ಟ್ವಿಟ್ಟರ್ ಖಾತೆಯಲ್ಲಿ ತನಗೆ ಸೋಂಕು ಇರುವುದನ್ನು ತಿಳಿಸಿದ್ದು, ಆರೋಗ್ಯದಿಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಹಲವು ವೈದ್ಯರ ಸಹಿತ ಎಲ್ಲ ಸ್ತರಗಳಲ್ಲಿ ದುಡಿಯುವವರನ್ನೂ ಕೊರೊನಾ ಬಾಧಿಸಿದೆ.