ಬಂಟ್ವಾಳ ಟೌನ್ ರೋಟರಿ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಸಾಧನಾ ರೆಸಿಡೆನ್ಸಿಯಲ್ಲಿರುವ ರೋಟರಿ ಸಾಧನಾ ಹಾಲ್ ನಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3180ರ ಪೂರ್ವ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ, ಸೇವಾ ಮನೋಭಾವದ ಸಂಘಟನೆಯಾದ ರೋಟರಿಯಲ್ಲಿ ಅನುಭವಿ ನಾಯಕತ್ವ ಹಾಗೂ ಚುರುಕಿನ ತಂಡ ಜತೆಗೂಡಿ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ನಾಲ್ಕರ ಸಹಾಯಕ ಗವರ್ನರ್ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕೋವಿಡ್ ಎಲ್ಲೆಡೆ ವ್ಯಾಪಿಸಿರುವ ಹೊತ್ತಿನಲ್ಲಿ ಹೊಸ ರೀತಿಯ ಬದುಕನ್ನು ನಾವು ನಿರ್ಮಿಸಿಕೊಳ್ಳಬೇಕಾಗಿದ್ದು, ರೋಟರಿ ಕ್ಲಬ್ ಮೂಲಕ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ನಡೆಸಬಹುದು ಎಂದು ಹಾರೈಸಿದರು. ಜಿಲ್ಲಾ ಗವರ್ನರ್ ಆಗಿ ನಿಯೋಜಿತರಾಗಿರುವ ಎನ್. ಪ್ರಕಾಶ್ ಕಾರಂತ, ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷ ಎನ್. ನಾರಾಯಣ ಹೆಗ್ಡೆ ಮತ್ತು ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ ಶುಭ ಹಾರೈಸಿದರು.
2020-21ರ ಅಧ್ಯಕ್ಷರಾಗಿ ಆಯ್ಜೆಗೊಂಡ ಪದ್ಮನಾಭ ರೈ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮತ್ತು ಖಜಾಂಚಿ ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ಉಪಾಧ್ಯಕ್ಷರಾಗಿ ಜಗನ್ನಾಥ ಚೌಟ, ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಕ್ಲಬ್ ಸರ್ವೀಸ್ ನ ಶನ್ಫತ್ ಶರೀಫ್, ಕಮ್ಯೂನಿಟಿ ಸರ್ವೀಸ್ ಶಾಂತರಾಜ್, ವೊಕೇಶನಲ್ ಸರ್ವೀಸ್ ಶಂಕರ ಶೆಟ್ಟಿ, ಇಂಟರ್ನಾಶನಲ್ ಸರ್ವೀಸ್ ಸುಧೀರ್ ಶೆಟ್ಟಿ, ಯೂತ್ ಸರ್ವೀಸ್ ಸ್ಟೀವನ್ ಡಿಸೋಜ, ಪೊಲಿಯೋ ಚೇರ್ಮನ್ ಡಿ. ಸಂತೋಷ್ ಬಾಬು, ಟಿ.ಆರ್.ಎಫ್. ಚೇರ್ಮನ್ ಸುರೇಶ್ ಸಾಲ್ಯಾನ್, ಮೆಂಬರ್ಶಿಪ್ ಡ್ರೈವ್ ಚೇರ್ಮನ್ ಸುಧಾಕರ ಸಾಲ್ಯಾನ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ದಯಾನಂದ ಶೆಟ್ಟಿ, ವಿನ್ಸ್ ಚೇರ್ಮನ್ ಸುಕುಮಾರ್, ಟೀಚ್ ಚೇರ್ಮನ್ ಶೇಷಪ್ಪ ಮೂಲ್ಯ, ವೆಬ್ ಚೇರ್ಮನ್ ಆಶಾಮಣಿ ಡಿ. ರೈ, ಸಾರ್ಜೆಂಟ್ ಎಟ್ ಆರ್ಮ್ಸ್ ಗಣೇಶ್ ಶೆಟ್ಟಿ ಗೋಳ್ತಮಜಲು ಅಧಿಕಾರ ಸ್ವೀಕರಿಸಿದರು. ಈ ವೇಳೆ ನಿರ್ಗಮನ ಕಾರ್ಯದರ್ಶಿ ಪಲ್ಲವಿ ಕಾರಂತ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್ ಮತ್ತು ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡ ಪ್ರಕಾಶ್ ಕಾರಂತ ಅವರನ್ನು ಸನ್ಮಾನಿಸಲಾಯಿತು. ರೊಟೇರಿಯನ್ ಗಳಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ವಿಂಧ್ಯಾ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ವಂದಿಸಿದರು.