ಕವರ್ ಸ್ಟೋರಿ

ನಿಯಮ ಪಾಲಿಸಿದರೆ ಸಲೀಸು, ಇಲ್ಲದಿದ್ದರೆ ವಾಹನ ಸಂಚಾರಕ್ಕೆ ಹರಸಾಹಸ!!

ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಬಂಟ್ವಾಳ ಪೇಟೆಯಲ್ಲಿ ರಸ್ತೆವಾಹನ ದಟ್ಟಣೆಯಿಂದ ಕೂಡಿರುತ್ತದೆ ಎಂಬುದು ಎಲ್ಲರೂ ನಿರೀಕ್ಷಿಸಿದ ವಿಷಯ. ಆದರೆ ಸಣ್ಣ ರಸ್ತೆಯಿಂದ ದೊಡ್ಡ ರಸ್ತೆ ಸಂಪರ್ಕಿಸುವ ಜಾಗ ವಾಹನಗಳು ಸಂಚರಿಸುವಂತೆ ಇರಬೇಕು ಎಂಬುದನ್ನೂ ಗಮನಿಸಬೇಕಾಗುತ್ತದೆ. ವಾಹನಗಳನ್ನು ಬಂಟ್ವಾಳ ಪೇಟೆಯಲ್ಲಿ ಸಂಚರಿಸಲು ಒಂದಲ್ಲ ಒಂದು ದಿನ ಅನುವು ಮಾಡಿಕೊಡಬೇಕಾಗುತ್ತದೆ, ಆಗ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಸ್ತೆ ಬಂದ್ ಆಗುವವರೆಗೆ ಬಂಟ್ವಾಳ ಪೇಟೆಯಿಂದ ಜಕ್ರಿಬೆಟ್ಟು ಸಹಿತ ಹೆದ್ದಾರಿ ಸಂಪರ್ಕಿಸುವ ಭಾಗಗಳಲ್ಲಿ ಮಣ್ಣು, ಜಲ್ಲಿಹುಡಿ ಹಾಕಿ ಗುಂಡಿ ಮುಚ್ಚಲಾಗಿದೆಯೇ ವಿನಃ ಸೈಡ್ ಕೊಟ್ಟರೆ ಹುಗಿಯುವ ಪರಿಸ್ಥಿತಿ ಉದ್ಭವವಾಗಿದೆ ಎನ್ನುತ್ತಾರೆ ನಿತ್ಯ ಪ್ರಯಾಣಿಕರು.

ಸಮಸ್ಯೆ ಏನು: ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತ ಜುಲೈ 18ರ ವರೆಗೆ ಈ ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ನೀಡಿದ ಬಳಿಕ ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುತ್ತಿರುವ ಪರಿಣಾಮ ಅಗಲಕಿರಿದಾದ ಬಂಟ್ವಾಳ ಪೇಟೆಯಲ್ಲಿ ಸಂಚಾರದೊತ್ತಡ. ರಸ್ತೆ,ಅಂಗಡಿ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿ ಟ್ರಾಫಿಕ್ ಜಾಮ್ ಮಾಡುವುದು ಒಂದೆಡೆಯಾದರೆ ಎದುರುಬದುರು ವಾಹನಗಳು ಮುಖಾಮುಖಿಯಾಗಿ ಯಾರು ಸೈಡ್ ಕೊಡುವುದು ಎಂಬ ವಿಚಾರದ ಜಿಜ್ಞಾಸೆಯಲ್ಲಿ ಸಮಯ ವ್ಯರ್ಥವಾಗುತ್ತಿದೆ.

ಪೊಲೀಸರು ನಿಂತರೂ ರಸ್ತೆ ಬದಿ ವಾಹನಗಳು ನಿಂತುಕೊಳ್ಳುವುದು ಸ್ಟಾಪ್ ಆಗಿಲ್ಲ. ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವ ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಪೇಟೆಯ ಮೂಲಕವೇ ಸಾಗುತ್ತಿರುವುದು ಮತ್ತಷ್ಟು ಬ್ಲಾಕ್ ಗಳಿಗೆ ಕಾರಣವಾಗುತ್ತಿದೆ.

ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ಈ ಹಿಂದೆ ನಡೆದ ವರ್ತಕರ ಸಭೆಯಲ್ಲಿ ಬಂಟ್ವಾಳ ಬಡ್ಡಕಟ್ಟೆ ಸೇತುವೆಯ ಬಳಿಯಿಂದ ಸರಕಾರಿ ಆಸ್ಪತ್ರೆಯವರೆಗೆ ಯಾವುದೇ ವಾಹನಗಳು ರಸ್ತೆ ಬದಿ ನಿಲ್ಲದಂತೆ ತೀರ್ಮಾನಿಸಲಾಗಿದ್ದು ಆ ತೀರ್ಮಾನ ಸಭೆಯ ಬಳಿಕ ಎಲ್ಲರಿಗೂ ಮರೆತುಹೋದಂತಿದೆ.

ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯಲ್ಲಿ ಬಸ್ಸುಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ಹಾಗೂ ಜಕ್ರಿಬೆಟ್ಟಿನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ. ಬಿ.ಸಿ.ರೋಡಿನಲ್ಲಿ ಪೊಲೀಸರು ಲಘು ವಾಹನಗಳನ್ನು ಬಂಟ್ವಾಳ ಪೇಟೆ ಹಾಗೂ ಘನ ವಾಹನಗಳನ್ನು ಉಪ್ಪಿನಂಗಡಿ ರಸ್ತೆಯಲ್ಲಿ ಕಳುಹಿಸುತ್ತಿದ್ದಾರೆ. ಜತೆಗೆ ಜಕ್ರಿಬೆಟ್ಟಿನಲ್ಲಿ ಲಘು ವಾಹನಗಳನ್ನು ಬಂಟ್ವಾಳ ಪೇಟೆಯ ಮೂಲಕ ಸಾಗುವುದಕ್ಕೆ ಸೂಚನೆ ನೀಡುತ್ತಿದ್ದಾರೆ 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts