ಬಂಟ್ವಾಳ

ಕಾರಿಂಜದ ಕೋತಿಗೆ ಬೆಲ್ಟ್ ತೊಡಿಸಿದ ದುಷ್ಕರ್ಮಿಗಳು

ದುಷ್ಕರ್ಮಿಗಳು  ಕೋತಿಯ ಸೊಂಟಕ್ಕೆ ಬೆಲ್ಟ್ ತೊಡಿಸಿದ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆದಿದೆ. ಕಾರಿಂಜ ಕ್ಷೇತ್ರ ಕೋತಿಗಳಿಗೆ ಪ್ರಸಿದ್ಧ. ಇಲ್ಲಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿರುವ ಸುಮಾರು 50ಕ್ಕೂ ಅಧಿಕ ಕೋತಿಗಳು ಅಲ್ಲಿಗೆ ಬರುವ ಭಕ್ತರಿಂದ ಆಹಾರ ಹಾಗೂ ದೇವಸ್ಥಾನದ ನೈವೇದ್ಯ ಭೋಜನದ ಪ್ರಸಾದವನ್ನು ಸೇವಿಸುತ್ತವೆ. ಸಾಮಾನ್ಯವಾಗಿ ಅಲ್ಲಿಗೆ ವಿಹಾರಕ್ಕೆಂದು ಬರುವವರು ಕೋತಿಗಳಿಗೆ ಕೀಟಲೆ ಮಾಡುವುದುಂಟು. ಆದರೆ ಇದು ಅತಿರೇಕಕ್ಕೆ ಹೋದದ್ದು ಮಂಗಳವಾರ ಬೆಳಕಿಗೆ ಬಂದಿದೆ. ದೇವಸ್ಥಾನ ದ ಕೆಳಭಾಗದಲ್ಲಿರುವ ಗದಾ ತೀರ್ಥ ಕೆರೆಯ ರಥ ಬೀದಿಯಲ್ಲಿ ಈ ಕೋತಿ ಕಂಡು ಬಂದಿದ್ದು, ಸುಮಾರು ಏಳೆಂಟು ದಿನಗಳ ಹಿಂದೆ ಬೆಲ್ಟ್ ತೊಡಿಸಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ದೇವಸ್ಥಾನ ದ ಮೇನೇಜರ್ ಸತೀಶ್ ಪ್ರಭು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ