ಮಾಹಿತಿ

ಬೆಳಗ್ಗೆ ಬಿಸಿನೀರು ಕುಡಿದರೆ ಯಾಕೆ ಒಳ್ಳೆಯದು ಗೊತ್ತಾ?

ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಕುಡಿದರೆ ಏನುಪಯೋಗ ಎನ್ನುವುದನ್ನು ವೈದ್ಯ ಡಾ. ಎ.ಜಿ.ರವಿಶಂಕರ್ ವಿವರಿಸುತ್ತಾರೆ.

ಆಭ್ಯಂತರ ಉಪಯೋಗಗಳು

ಚೆನ್ನಾಗಿ ಕುದಿಸಿ ಆರಿಸಿದ ನೀರು ಆರೋಗ್ಯವನ್ನು ಕಾಪಾಡಲು ಮತ್ತು ಸರಿಪಡಿಲು ಸಹಕರಿಸುವ ಮೂಲಕ  ಮನುಷ್ಯನ ಸುಖಮಯವಾದ ದೀರ್ಘಕಲೀನ ಜೀವನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ.

  1. ಬೆಳಗ್ಗೆ ಆಹಾರದ ಮೊದಲು ಬಿಸಿನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
  2. ಬೆಳಗ್ಗೆ ಆಹಾರದ ಮೊದಲು ಸಾಧಾರಣ 1 ಲೀಟರಿನಷ್ಟು ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಸೊಂಟ ನೋವನ್ನು ತಡೆಕಟ್ಟ ಬಹುದು.
  3. ಬಿಸಿನೀರು ಶಾರೀರಿಕ ಮತ್ತು  ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ
  4. ಬಿಸಿನೀರು ಕುಡಿಯುವುದರಿಂದ ಗಂಟಲು ಮತ್ತು ಎದೆಯಲ್ಲಿ ಗಟ್ಟಿಯಾಗಿರುವ ಕಪ ಕರಗುತ್ತದೆ.
  5. ಎದೆ ಉರಿ, ಹುಳಿತೇಗು ಇತ್ಯಾದಿ ಲಕ್ಷಣಗಳು ಇದ್ದಾಗ ಅವಾಗಾವಾಗ ಯಥೇಷ್ಟವಾಗಿ ಬಿಸಿನೀರನ್ನು ಕುಡಿಯಬೇಕು.
  6. ನಿಯಮಿತವಾಗಿ ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಕ್ರಿಮಿಯ ಬಾಧೆ ಕಡಿಮೆಯಾಗುತ್ತದೆ.
  7. ಬಿಸಿನೀರು ದೇಹದಲ್ಲಿ ರಕ್ತಸಂಚಾರವನ್ನು ಉತ್ತೇಜಿಸುವ ಮೂಲಕ ಅವಯವಗಳಿಗೆ ಸೂಕ್ತ ಪೋಷಣೆ ದೊರಕಲು ಸಹಕರಿಸುತ್ತದೆ.
  8. ಬಿಸಿನೀರು ಅಜೀರ್ಣವನ್ನು ಹೋಗಲಾಡಿಸಿ ಬಾಯಿರುಚಿಯನ್ನು ಹೆಚ್ಚಿಸುತ್ತದೆ.
  9. ಬಿಸಿನೀರನ್ನು ಯಥೇಷ್ಟವಾಗಿ ಕುಡಿಯುವುದರಿಂದ ಶರೀರದ ಅನಾವಶ್ಯಕ ಕೊಬ್ಬು ನಿವಾರಣೆಯಾಗುತ್ತದೆ.
  10. ಬಿಸಿನೀರು ಶರೀರದ ಕಲ್ಮಶವನ್ನು ಬೆವರು ಹಾಗು ಮೂತ್ರದ ಮೂಲಕ ದೇಹದಿಂದ ಹೊರ ಹಾಕುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ