ಬಂಟ್ವಾಳ: ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯ ಕಾರ್ಮಿಕರಿಗೆ ರಾಜ್ಯ ಸರಕಾರ ಕೊಡುವ ಒಂದು ಬಾರಿಯ 5 ಸಾವಿರ ರೂಗಳ ನೆರವಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು, ಜುಲೈ 10 ಅರ್ಜಿ ಸಲ್ಲಿಕೆಗೆ ಕೊನೇ ದಿನ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಜೂನ್ 30 ಕೊನೇ ದಿನಾಂಕವಾಗಿತ್ತು. ಅದರೆ ಕಾರ್ಮಿಕ ಮುಖಂಡರ ಮನವಿಗೆ ಸ್ಪಂದಿಸಿ ಇಲಾಖೆ ದಿನಾಂಕ ವಿಸ್ತರಿಸಿದೆ.
ಸೌಲಭ್ಯ ಪಡೆಯಲು ಫಲಾನುಭವಿ ಕಡ್ಡಾಯವಾಗಿ ಕ್ಷೌರಿಕ ಅಥವಾ ಅಗಸ ವೃತ್ತಿಯಲ್ಲಿ ತೊಡಗಿರಬೇಕು, 18ರಿಂದ 65 ವರ್ಷಗಳವರಾಗಿರಬೇಕು, ಬಿಪಿಎಲ್ ಕುಟುಂಬಗಳಿಗಷ್ಟೇ ಇದು ಅನ್ವಯ,ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ಅವಕಾಶ, ಕರ್ನಾಟಕದಲ್ಲಿ ರಾಜ್ಯದ ಬಿಪಿಎಲ್ ಹೊಂದಿದ ಹೊರರಾಜ್ಯದ ಕಾರ್ಮಿಕರೂ ಅರ್ಹರು, ಸೇವಾ ಸಿಂದು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಉದ್ಯೋಗ ದೃಢೀಕರಣ ಪತ್ರವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದು ಅಪ್ಲೋಡ್ ಮಾಡಬೇಕು, ಮೊಬೈಲ್ ಸಂಖ್ಯೆ ಹೊಂದಿರಬೇಕು, ಬ್ಯೂಟಿಷಿಯನ್ ಅಥವಾ ಇತರೆ ಕೆಲಸ ಇದ್ದರೆ ಅರ್ಹರಲ್ಲ ಎಂದು ಕಾರ್ಮಿಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಯೋಗ ದೃಢೀಕರಣ ಪತ್ರ ನೀಡುವ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪುರಸಭೆ, ಪಪಂ, ಕಂದಾಯ ಅಧಿಕಾರಿ ಮತ್ತು ಕಂದಾಯ ನಿರೀಕ್ಷಕರು., ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಪಿಡಿಒಗಳು , ಗ್ರಾಪಂ ಕಾರ್ಯದರ್ಶಿಗಳು.
ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಉದ್ಯೋಗ ಧೃಢೀಕರಣ ಪತ್ರ, ಸ್ವಯಂಘೋಷಣೆ, ಜನ್ಮದಿನಾಂಕ ದಾಖಲೆ, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಅಗತ್ಯ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು. ಕೊನೇ ದಿನಾಂಕ ಜುಲೈ 10 . ಅರ್ಹ ಫಲಾನುಭವಿಗಳಿಗೆ ಆಧಾರ್ ಲಿಂಕ್ ಹೊಂದಿರುವ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)