ಪ್ರಮುಖ ಸುದ್ದಿಗಳು

ಕೊರೊನಾ ಮಹಾಜಿಗಿತ: ರಾಜ್ಯದಲ್ಲಿ ಇಂದು 1267 ಮಂದಿಗೆ ಸೋಂಕು, 16 ಸಾವು

ನಿನ್ನೆ 12 ಸಾವಿರದ ಸನಿಹವಿದ್ದ ಸಂಖ್ಯೆ ಇವತ್ತು 13,190.

ಜಾಹೀರಾತು

ಇದು ಕರ್ನಾಟಕದಲ್ಲಿ ಇಂದು ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯಾಸ್ಫೋಟ. ಒಟ್ಟು 1267 ಮಂದಿಗೆ ಕೊರೊನಾ ಸೋಂಕು ಭಾನುವಾರ ದೃಢಪಟ್ಟಿದೆ. ಇವರಲ್ಲಿ ಇಂದು ಬಿಡುಗಡೆಯಾದ 220 ಮಂದಿ ಸೇರಿದಂತೆ 7507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಸಕ್ರಿಯ ಪ್ರಕರಣಗಳೇ 5472 ಇವೆ. ಇವತ್ತು 16 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೀಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 207 ಆಗಿದೆ. ಐಸಿಯುನಲ್ಲೇ 243 ಮಂದಿ ಇದ್ದಾರೆ.

ಬೆಂಗಳೂರು ನಗರ ಒಂದರಲ್ಲಿ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರ್ಗಿ 34, ಹಾಸನ 31, ಗದಗ 30 ಹೀಗೆ ಇಂದು ಪತ್ತೆಯಾದ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ, ಬೆಂಗಳೂರು ನಗರದಲ್ಲಿ 3314 ಸೋಂಕಿತರು ಕಂಡುಬಂದರೆ, ಉಡುಪಿಯಲ್ಲಿ 1179 ಮಂದಿ. ದಕ್ಷಿಣ ಕನ್ನಡ 665, ಬಳ್ಳಾರಿ 697 ಆಗಿದ್ದರೆ, ಕಲಬುರ್ಗಿ 1398 ಇದೆ.  ಆದರೆ ಸಕ್ರಿಯ ಪ್ರಕರಣಗಳಿರುವುದನ್ನು ಲೆಕ್ಕ ಹಾಕಿದರೆ, ಬೆಂಗಳೂರು ನಗರ ಟಾಪ್ 1 ಆಗಿದೆ. 2692 ಸಕ್ರಿಯ ಪ್ರಕರಣಗಳು ಬೆಂಗಳೂರು ನಗರ ಒಂದರಲ್ಲೇ ಇವೆ. ದಕ್ಷಿಣ ಕನ್ನಡ 272, ಬಳ್ಳಾರಿ 373, ಉಡುಪಿ 135, ಕಲಬುರ್ಗಿ 371 ಸಕ್ರಿಯ ಪ್ರಕರಣಗಳಿವೆ.

ದಕ್ಷಿಣ ಕನ್ನಡದಲ್ಲಿ ಹೀಗಿದೆ:

ಕೊರೊನಾ ಪ್ರಕರಣಗಳು ಪತ್ತೆಯಾಗಲಾರಂಭಿಸಿದ ನಂತರದ ದೊಡ್ಡ ಆಘಾತ ದಕ್ಷಿಣ ಕನ್ನಡ ಜಿಲ್ಲೆಗೆ ಇವತ್ತು ಆಗಿದೆ. ಇಂದು ಒಂದೇ ದಿನ 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 3 ಮಂದಿ ಸಾವನ್ನಪ್ಪಿದ್ದಾರೆ. ಮಂಗಳೂರು ತಾಲೂಕು ನಿವಾಸಿ ಪುರುಷ ಮತ್ತು ಮಹಿಳೆ ಮತ್ತು ಬಂಟ್ವಾಳ ತಾಲೂಕಿನ ಮಹಿಳೆ ಸಾವನ್ನಪ್ಪಿದವರು.

ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿದೆ. ಇಂದು 6 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು 377 ಮಂದಿಯ ಗಂಟಲು ದ್ರವ ಮಾದರಿ ಕಳುಹಿಸಲಾಗಿದೆ. ಒಟ್ಟು 480 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಲು ಬಾಕಿ ಇದೆ. ಇಂದು ಗೊತ್ತಾದ 178 ಪರೀಕ್ಷಾ ವರದಿಗಳಲ್ಲಿ 97 ಪಾಸಿಟಿವ್, 81 ನೆಗೆಟಿವ್ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 673 ಮಂದಿಗೆ ಕೊರೊನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಇವರಲ್ಲಿ 10 ಅನ್ಯರಾಜ್ಯ, ಜಿಲ್ಲೆಯವರಾಗಿದ್ದು, ಜಿಲ್ಲೆಯವರದ್ದೇ ಆದ 663 ಕೇಸ್ ಗಳಿವೆ. 13 ಮಂದಿ ಸಾವನ್ನಪ್ಪಿದ್ದರೆ, 422 ಮಂದಿ ಗುಣಮುಖರಾಗಿದ್ದಾರೆ. 238 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts