ವಿಟ್ಲ

ಅಳಿಕೆ: 70 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ

ಅಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 70ಲಕ್ಷದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸುಮಾರು 30ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಶುಕ್ರವಾರ ನಡೆಸಲಾಯಿತು.

ವಾಣಿ ವಿಹಾರ ಶಾಲಾ ಬಳಿ ಬಸ್ಸು ತಂಗುದಾಣ, ಪಡೀಲು ರಸ್ತೆ, ಬೋಳ್ನಾಡು ಭಗವತೀ ದೇವಸ್ಥಾನ ರಸ್ತೆ, ಕೊಲ್ಲಗುಳಿ ರಸ್ತೆ, ಪಡಿಬಾಗಿಲು, ಮುಡಾಯಿಬೆಟ್ಟು ರಸ್ತೆಗಳ ಕಾಂಗ್ರೀಟೀಕರಣ, ಸತ್ಯ ಸಾಯಿ ವಿಹಾರ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ಬೋಳ್ನಾಡು ದೇವಸ್ಥಾನ ಬಳಿ ಶೌಚಾಲಯ ಕಾಮಗಾರಿ, ದರ್ಬೆ ಬಾಂಡೀಲು ರಸ್ತೆ, ಕಲ್ಲೆಂಚಿಪಾದೆ ರಸ್ತೆ, ಕಲ್ಲಜೇರ -ಕೇಕಣಾಜೆ ರಸ್ತೆ, ಚೆಂಡುಕಳ ರಸ್ತೆ, ಗೋಶಾಲೆ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರು ನಡೆಸಿದರು.

ಸುಮಾರು 20ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ರುದ್ರಭೂಮಿ (ಮೋಕ್ಷಧಾಮವನ್ನು) ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಕೆ. ಎಸ್. ಕೃಷ್ಣ ಭಟ್ ಅವರು ಲೋಕಾರ್ಪಣೆಗೊಳಿಸಿದರು. ರುದ್ರಭೂಮಿ ಕಛೇರಿ ಕಟ್ಟಡ, ತಂಗುದಾಣ, ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ  ನಡೆಸಿದರು. ಕುದ್ದುಪದವು ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀಕೋಡಂದೂರು ಶಿಲಾನ್ಯಾಸ ನಡೆಸಿದರು.

ಅಳಿಕೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಎಪಿಎಂಸಿ ಸದಸ್ಯರಾದ ಗೀತಲತಾ ಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಮೋಹನ್ ಪಿ., ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ರಾಮಪೂಜಾರಿ ತಾಳಿಪಡ್ಪು, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಜಗದೀಶ ಶೆಟ್ಟಿ ಮುಳಿಯ, ಅಬ್ದುಲ್ಲ ರಹಿಮಾನ್, ಜಯಂತಿ, ಸರೋಜಿನಿ, ಮುಕಾಂಬಿಕಾ ಭಟ್, ಸುಧಾಕರ ಮಡಿಯಾಲ, ಗಿರಿಜ, ಕವಿತಾ, ರವೀಶ, ಸೆಲ್ವಿನಾ ಡಿಸೋಜ, ಅಳಿಕೆ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ಸೀತಾರಾಮ ಶೆಟ್ಟಿ ಮುಳಿಯ, ನೀಲಪ್ಪ ಗೌಡ, ಬಾಲಕೃಷ್ಣ ಪೂಜಾರಿ, ಅಣ್ಣು ಕುಲಾಲ್, ಈಶ್ವರ ನಾಯ್ಕ, ಯಶೋಧರ ಬಂಗೇರ, ತಿಮ್ಮಪ್ಪ ಶೆಟ್ಟಿ ಅಳಿಕೆಗುತ್ತು, ಪಾಂಡುರಂಗ ಆಚಾರ್ಯ, ಗೋಪಾಲಕೃಷ್ಣ ವದ್ವ, ವೆಂಕಪ್ಪ ನಾಯ್ಕ ಬೀಮಾವಾರ, ಇಂಜಿನಿಯರ್ ಗಳಾದ ಜಗದೀಶ್, ಮಹೇಶ್ ಹಾಗೂ ಅಂಗನವಾಡಿ ಕಾರ್ಯರ್ತರು ಹಾಜರಿದ್ದರು.

ರುದ್ರಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ರಾಜೇಂದ್ರ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ಪ್ರಸ್ತಾವನೆಗೈದರು. ನಿರ್ಮಾಣ ಸಮಿತಿ ಕೋಶಾಧಿಕಾರಿ ಬಾಲಕೃಷ್ಣ ಕಾರಂತ ಎರುಂಬು ವಂದಿಸಿದರು. ಪಂಚಾಯಿತಿ ಸದಸ್ಯ ಸದಾಶಿವ ಶೆಟ್ಟಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ