ಬಂಟ್ವಾಳ

SSLC ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್, ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ

ಜಾಹೀರಾತು

SSLC ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್.ಬಂಟ್ವಾಳ ತಾಲೂಕಿನಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆಗೆ ಸಕಲ ಮುನ್ನೆಚ್ಚರಿಕೆಯನ್ನು ಆಡಳಿತ ಕೈಗೊಂಡಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ 5 ಕೇಂದ್ರಗಳಾದ ಎಸ್. ವಿ. ಎಸ್. ಬಂಟ್ವಾಳ , ಪಾಣೆಮಂಗಳೂರಿನ ಶ್ರೀ ಶಾರದಾ, ಎಸ್ ಎಲ್ ಎನ್ ಪಿ ಪ್ರೌಢಶಾಲೆ ಹಾಗೂ ಮೊಡಂಕಾಪಿನ ದೀಪಿಕಾ ಮತ್ತು ಕಾರ್ಮೆಲ್ ಶಾಲೆಗಳು, ವಿಟ್ಲ ಪ.ಪೂ.ಕಾಲೇಜಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳ ಸಹಿತ, ವಾಮದಪದವು, ವಗ್ಗ, ಮಂಚಿ,ಮುಡಿಪು, ಮೋಂಟೆಪದವು, ಕನ್ಯಾನ ಸ.ಹಿ.ಪ್ರಾ.ಶಾಲೆ ಹಾಗೂ ಮಾಣಿ ಕರ್ನಾಟಕ ಪ್ರೌಢಶಾಲೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ತುಂಬೆ ಪ.ಪೂ., ಅಳಿಕೆ ಶ್ರೀಸತ್ಯ ಸಾಯಿ ಪ್ರೌಢಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 5300 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಬಂಟ್ವಾಳದಲ್ಲಿ ಪುರಸಭೆ ಉಳಿದೆಡೆ ಆಯಾ ಗ್ರಾಪಂಗಳು ಸ್ಯಾನಿಟೈಸ್ ಮಾಡುವ ಪ್ರಕ್ರಿಯೆಯನ್ನು ನಡೆಸಿವೆ.

ಕೆಲ ವಿದ್ಯಾರ್ಥಿಗಳನ್ನು ಅವರ ಪೋಷಕರೇ ಪರೀಕ್ಷಾ ಕೇಂದ್ರಕೆ ತಲುಪಿಸುವ ಕರೆದೊಯ್ಯುವ ಜವಬ್ದಾರಿ ವಹಿಸಿದ್ದಾರೆ.ಖಾಸಗಿ ಶಾಲೆಗಳು ಅವರ ಶಾಲಾ ಬಸ್ ಬಳಸಿಕೊಳ್ಳಲಿದೆ. ಮುಡಿಪು,ಮೊಂಟೆಪದವು ಪರೀಕ್ಷಾ ಕೇಂದ್ರಕ್ಕೆ ಶಾಸಕ ಯು.ಟಿ. ಖಾದರ್ ಸಲಹೆಯಂತೆ ಸೂರಜ್ ಶಿಕ್ಷಣ ಸಂಸ್ಥೆ ಮತ್ತು ಆಲ್ ಮದೀನಾ ಶಿಕ್ಷಣ ಸಂಸ್ಥೆ ತಲಾ ಒಂದರಂತೆ ಉಚಿತ ಬಸ್ ಸೌಲಭ್ಯ ಒದಗಿಸಲಿದೆ. ಸರಕಾರಿ ಶಾಲೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸೂಚನೆಯಂತೆ ಅರಳ ಜನಹಿತಾಯ ಶಿಕ್ಷಣ ಸಂಸ್ಥೆಯ-4, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ10, ದಡ್ಡಲಕಾಡು ಶ್ರೀ ದುರ್ಗಾಚಾರೀಟೇಬಲ್ ಸಂಸ್ಥೆಯ-4, ಪಚ್ಚಿನಡ್ಕ ಶುಭಲಕ್ಷ್ಮಿಟ್ರಾವಲ್ಸ್-4, ಸಜೀಪಮೂಡ ವೃಷಭಟ್ರಾವಲ್ಸ್-4  ಬಸ್ ಗಳನ್ನು ಒದಗಿಸಿವೆ.  ಉಡುಪಿ ಜಿ.ಶಂಕರ್ ಪ್ರತಿಷ್ಠಾನ ಮತ್ತ ಜಿಲ್ಲಾಸ್ಕ್ವೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ತಲಾ 2ರಂತೆ ಉಚಿತ ಮಾಸ್ಕ್ ವಿತರಿಸಿದೆ. ಕೊರೋನ ಭೀತಿಯ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಹಕರಿಸಿದೆ. ಪೊಲೀಸ್ ಸೂಕ್ತ ಬಂದೋಬಸ್ತ್ ನೋಡಿಕೊಳ್ಳಲಿದ್ದು, ಮಕ್ಕಳು ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿದೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ