SSLC ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್.ಬಂಟ್ವಾಳ ತಾಲೂಕಿನಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆಗೆ ಸಕಲ ಮುನ್ನೆಚ್ಚರಿಕೆಯನ್ನು ಆಡಳಿತ ಕೈಗೊಂಡಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ 5 ಕೇಂದ್ರಗಳಾದ ಎಸ್. ವಿ. ಎಸ್. ಬಂಟ್ವಾಳ , ಪಾಣೆಮಂಗಳೂರಿನ ಶ್ರೀ ಶಾರದಾ, ಎಸ್ ಎಲ್ ಎನ್ ಪಿ ಪ್ರೌಢಶಾಲೆ ಹಾಗೂ ಮೊಡಂಕಾಪಿನ ದೀಪಿಕಾ ಮತ್ತು ಕಾರ್ಮೆಲ್ ಶಾಲೆಗಳು, ವಿಟ್ಲ ಪ.ಪೂ.ಕಾಲೇಜಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳ ಸಹಿತ, ವಾಮದಪದವು, ವಗ್ಗ, ಮಂಚಿ,ಮುಡಿಪು, ಮೋಂಟೆಪದವು, ಕನ್ಯಾನ ಸ.ಹಿ.ಪ್ರಾ.ಶಾಲೆ ಹಾಗೂ ಮಾಣಿ ಕರ್ನಾಟಕ ಪ್ರೌಢಶಾಲೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ತುಂಬೆ ಪ.ಪೂ., ಅಳಿಕೆ ಶ್ರೀಸತ್ಯ ಸಾಯಿ ಪ್ರೌಢಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 5300 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಬಂಟ್ವಾಳದಲ್ಲಿ ಪುರಸಭೆ ಉಳಿದೆಡೆ ಆಯಾ ಗ್ರಾಪಂಗಳು ಸ್ಯಾನಿಟೈಸ್ ಮಾಡುವ ಪ್ರಕ್ರಿಯೆಯನ್ನು ನಡೆಸಿವೆ.
ಕೆಲ ವಿದ್ಯಾರ್ಥಿಗಳನ್ನು ಅವರ ಪೋಷಕರೇ ಪರೀಕ್ಷಾ ಕೇಂದ್ರಕೆ ತಲುಪಿಸುವ ಕರೆದೊಯ್ಯುವ ಜವಬ್ದಾರಿ ವಹಿಸಿದ್ದಾರೆ.ಖಾಸಗಿ ಶಾಲೆಗಳು ಅವರ ಶಾಲಾ ಬಸ್ ಬಳಸಿಕೊಳ್ಳಲಿದೆ. ಮುಡಿಪು,ಮೊಂಟೆಪದವು ಪರೀಕ್ಷಾ ಕೇಂದ್ರಕ್ಕೆ ಶಾಸಕ ಯು.ಟಿ. ಖಾದರ್ ಸಲಹೆಯಂತೆ ಸೂರಜ್ ಶಿಕ್ಷಣ ಸಂಸ್ಥೆ ಮತ್ತು ಆಲ್ ಮದೀನಾ ಶಿಕ್ಷಣ ಸಂಸ್ಥೆ ತಲಾ ಒಂದರಂತೆ ಉಚಿತ ಬಸ್ ಸೌಲಭ್ಯ ಒದಗಿಸಲಿದೆ. ಸರಕಾರಿ ಶಾಲೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸೂಚನೆಯಂತೆ ಅರಳ ಜನಹಿತಾಯ ಶಿಕ್ಷಣ ಸಂಸ್ಥೆಯ-4, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ10, ದಡ್ಡಲಕಾಡು ಶ್ರೀ ದುರ್ಗಾಚಾರೀಟೇಬಲ್ ಸಂಸ್ಥೆಯ-4, ಪಚ್ಚಿನಡ್ಕ ಶುಭಲಕ್ಷ್ಮಿಟ್ರಾವಲ್ಸ್-4, ಸಜೀಪಮೂಡ ವೃಷಭಟ್ರಾವಲ್ಸ್-4 ಬಸ್ ಗಳನ್ನು ಒದಗಿಸಿವೆ. ಉಡುಪಿ ಜಿ.ಶಂಕರ್ ಪ್ರತಿಷ್ಠಾನ ಮತ್ತ ಜಿಲ್ಲಾಸ್ಕ್ವೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ತಲಾ 2ರಂತೆ ಉಚಿತ ಮಾಸ್ಕ್ ವಿತರಿಸಿದೆ. ಕೊರೋನ ಭೀತಿಯ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಹಕರಿಸಿದೆ. ಪೊಲೀಸ್ ಸೂಕ್ತ ಬಂದೋಬಸ್ತ್ ನೋಡಿಕೊಳ್ಳಲಿದ್ದು, ಮಕ್ಕಳು ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿದೆ.