ಸುಮಾರು 6 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಲಾಭ ತರುವ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ 2 ಸಾವಿರ ಎಕ್ರೆ ಕೃಷಿ ಭೂಮಿಗೆ ನೀರುಣಿಸುವ 45 ಕೋಟಿ ರೂಗಳ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರಕಿಸುವಂತೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದೆ. ನೇತ್ರಾವತಿ ನದಿಗೆ ತಾಗಿಕೊಂಡಿರುವ ಬಾಳ್ತಿಲ ಗ್ರಾಮ 3,942 ಎಕ್ರೆಗಳಿದ್ದು, 6272 ಜನಸಂಖ್ಯೆ, 1300 ಕುಟುಂಬಗಳನ್ನು ಹೊಂದಿದೆ. ಯೋಜನೆಯಿಂದ ಗ್ರಾಮದ ರೈತರಿಗೆ ನೆರವಾಗುವುದಲ್ಲದೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಸಿಎಂಗೆ ಮನವರಿಕೆ ಮಾಡಲಾಯಿತು. ಈ ವೇಳೆ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಗ್ರಾಮಸ್ಥ ಗೋಪಾಲ ಶೆಣೈ ಮತ್ತಿತರರು ಇದ್ದರು.