ಬಂಟ್ವಾಳ

ಬಂಟ್ವಾಳ ಕೆಸರುಮಯ ಹೆದ್ದಾರಿಯಲ್ಲಿ ಸಂಚಾರ ನಿಷೇಧ: ರಾ.ಹೆ.ಯಿಂದ ಪತ್ರ

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆಸರುಮಯವಾಗಿರುವ ಬಿ.ಸಿ.ರೋಡ್ – ಜಕ್ರಿಬೆಟ್ಟು ಹೆದ್ದಾರಿಯಲ್ಲಿ ಮುಂದಿನ 20 ದಿನಗಳ ಕಾಲ ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ.ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಜಿ.ಎನ್.ಹೆಗ್ಡೆ ಹಾಗೂ ಎಇಇ ಎಚ್.ಪಿ.ರಮೇಶ್ ನಿಯೋಗ ಹೆದ್ದಾರಿ ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಹೆದ್ದಾರಿಯ ಒಂದುಯ ಬದಿ 7 ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಯೂರಿಂಗ್‌ಗಾಗಿ 20 ದಿನಗಳ ಸಮಯಾವಕಾಶ ಬೇಕಿರುವುದರಿಂದ ಸಂಚಾರ ನಿಷೇಧಕ್ಕೆ ಮನವಿ ಮಾಡಿದೆ.

ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಬಿ.ಸಿ.ರೋಡುನಿಂದ ಬೆಳ್ತಂಗಡಿಗೆ ಸಾಗುವ ಘನ ವಾಹನಗಳು ಬಿ.ಸಿ.ರೋಡು-ಉಪ್ಪಿನಂಗಡಿ-ಗುರುವಾಯನಕರೆ ಹೆದ್ದಾರಿಯಲ್ಲಿ ಸಂಚರಿಸಬೇಕು. ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುವುದಕ್ಕೆ ಕ್ರಮಕೈಗೊಳ್ಳಲು ಎಸ್‌ಪಿಗೆ ಸೂಚಿಸಲು ಪತ್ರದಲಲ್ಲಿ ತಿಳಿಸಲಾಗಿದೆ. ಎಂಆರ್‌ಪಿಎಲ್ ಪೈಪುಲೈನ್ ಕಾಮಗಾರಿಯನ್ನು ಕೂಡ ವೇಗವಾಗಿ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದು, ಜತೆಗೆ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ರಾ.ಹೆ.ಇಲಾಖೆಯ ಜೆಇ ಕೇಶವಮೂರ್ತಿ, ಎಇ ಕೀರ್ತಿ ಅಮೀನ್, ಗುತ್ತಿಗೆಯ ಸಂಸ್ಥೆಯ ಶರಣ್ ಗೌಡ, ದಾಮೋದರ್ ಎಂ.ಕೆ. ಜತೆಗಿದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts