ಬೋಳಿಯಾರ್ ಗ್ರಾಮದ ಧರ್ಮನಗರ ಸಮೀಪ ಜಳಕದಕಟ್ಟೆ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಶನಿವಾರ ನಡೆದ ಸಂದರ್ಭ ಮೃತದೇಹವನ್ನು ದಡ ಸೇರಿಸುವಲ್ಲಿ ಶಾಹಿದ್ ಮಲ್ಲಿ ಅವರನ್ನು ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಸನ್ಮಾನಿಸಿದರು. ಈ ವೇಳೆ ತಂಡದಲ್ಲಿದ್ದ ಅಲೀಮ್ ಮಲ್ಲಿ, ನೌಫಾಲ್ ಮಲ್ಲಿ, ಮುಸ್ತಫಾ ತಲೆಮುಗೋರ್, ಫಾರೀಸ್ ತಲೆಮೂಗೂರು ಅವರನ್ನು ಅಭಿನಂದಿಸಲಾಯಿತು. ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಸದಸ್ಯರದ ಇಕ್ಬಲ್ ಸುಜೀರ್, ಅಶ್ರಫ್ ಮಲ್ಲಿ, ಎನ್ ಎಸ್ ನಿಸಾರ್ ಮಾರಿಪಳ್ಳ, ಹಾಶಿಮ್ ಮಾರಿಪಳ್ಳ ಇನ್ನಿತರರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…