ಬಂಟ್ವಾಳ ಮಿನಿ ವಿಧಾನಸೌಧದ ಮುಂದೆ ಋಣಮುಕ್ತ ಹೋರಾಟ ಸಮಿತಿಯಿಂದ ನಾನಾ ಬೇಡಿಕೆ ಈಡೇರಿಕೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಬಳಿಕ ತಹಸೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಭಟ್, ಬಡ ಮಹಿಳೆಯರ ಮೈಕ್ರೋ ಫೈನಾನ್ಸ್ ಸಾಲಗಳ ಮನ್ನಾ ಹಾಗೂ ಕೊರೊನಾ ಸಂತ್ರಸ್ತ ಬಡವರಿಗೆ ನಗದು ಪರಿಹಾರ, ರೇಷನ್ ಒದಗಿಸಬೇಕು ಎಂದು ಒತ್ತಾಯಿಸಿದರು. ದ.ಕ. ಜಿಲ್ಲಾಋಣಮುಕ್ತ ಹೋರಾಟ ಸಮಿತಿಯ ಸಂಚಾಲಕರಾದ ಸಿಐಟಿಯು ಮುಖಂಡ ಎಲ್ ಮಂಜುನಾಥ್ ಮಾತನಾಡಿ, ಸರ್ಕಾರದ ನೀತಿಗಳನ್ನು ಟೀಕಿಸಿದರು. ತಾಲೂಕು ಕಾರ್ಯದರ್ಶಿಪ್ರಮೀಳಾ ಸ್ವಾಗತಿಸಿದರು. ಅದ್ಯಕ್ಷರಾದ ನಾಗರಾಜ್ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಯೋಗಿತಾ, ಜಯರಾಮ ಮಯ್ಯ, ರಾಮಚಂದ್ರ, ಯುವರಾಜ, ಋಣಮುಕ್ತ ಸಂಘಟನೆಯ ಪ್ರಿಯದರ್ಶಿನಿ, ಚಿತ್ರಾಕ್ಷಿ, ಭವ್ಯ ಬೆಳ್ತಂಗಡಿ, ಗಣೇಶ ಪ್ರಸಾದ್ ಮೊದಲಾದವರು ಇದ್ದರು.