ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಸಾಧನಾ ರೆಸಿಡೆನ್ಸಿ ಸಂಕೀರ್ಣದ ರೂಫ್ ಟಾಪ್ ನಲ್ಲಿ ನಿರ್ಮಾಣಗೊಂಡ ರೋಟರಿ ಸಾಧನಾ ಹಾಲ್ ಅನ್ನು ರೋಟರಿ ಜಿಲ್ಲೆ 3181ರ ಗವರ್ನರ್ ಜೋಸೆಫ್ ಮ್ಯಾಥ್ಯೂ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಬಂಟ್ವಾಳ ಟೌನ್ ನ ಪದಾಧಿಕಾರಿಗಳನ್ನು ಶ್ಲಾಘಿಸಿ, ಇನ್ನಷ್ಟು ರಚನಾತ್ಮಕ ಚಟುವಟಿಕೆಗಳನ್ನು ನಡೆಸುವಂತೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ರೋಟರಿ ಟೌನ್ ಅಧ್ಯಕ್ಷ ಜಯರಾಜ್ ಎಸ್.ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಧನಾ ರೆಸಿಡೆನ್ಸಿ ಮಾಲೀಕ ವಿಶ್ವನಾಥ ಬಂಟ್ವಾಳ್, 22-23ರ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ, ಸಹಾಯಕ ಗವರ್ನರ್ ರಿತೇಶ್ ಬಾಳಿಗ, 20-21ರ ಅಧ್ಯಕ್ಷ ಪದ್ಮನಾಭ ರೈ, 20-21ರ ಕಾರ್ಯದರ್ಶಿ ಕಿಶೋರ್, ಕಾರ್ಯದರ್ಶಿ ಪಲ್ಲವಿ ಕಾರಂತ ಉಪಸ್ಥಿತರಿದ್ದರು. ವಿಂಧ್ಯಾ ಎಸ್. ರೈ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ವಿಶ್ವನಾಥ್ ಬಂಟ್ವಾಳ್ ಅವರನ್ನು ಸನ್ಮಾನಿಸಲಾಯಿತು. ಹಾಲ್ ಗೆ ಕೊಡುಗೆ ನೀಡಿದ ರೊಟೇರಿಯನ್ ಅವರನ್ನು ಅಭಿನಂದಿಸಲಾಯಿತು.