ಬಂಟ್ವಾಳ ತಾಲೂಕು ಆಡಳಿತ ಸೇರಿದಂತೆ ಇತರ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಕೋವಿಡ್-೧೯ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸರಕಾರದ ಆದೇಶದಂತೆ ಗುರುವಾರ ಮಾಸ್ಕ್ ಡೇ ಆಚರಿಸಲಾಯಿತು.
ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಜಾಥಾ ನಡೆಯಿತು. ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಜಾಥಾಕ್ಕೆ ಚಾಲನೆ ನೀಡಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾ.ಪಂ.ಇಓ ರಾಜಣ್ಣ, ಬಿಇಒ.ಜ್ಞಾನೇಶ್,ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಉಪತಹಸೀಲ್ದಾರ್‌ಗಳಾದ ರಾಜೇಶ್ ನಾಯ್ಕ್, ಶ್ರೀಧರ್, ರಾಧಾಕೃಷ್ಣ ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್‌ಕುಮಾರ್ ಬೆಂಜನಪದವು, ದಿವಾಕರ್ ಮುಗುಳಿಯ, ಕಂದಾಯ ಇಲಾಖೆ ವಿಷಯ ನಿರ್ವಾಹಕ ವಿಷುಕುಮಾರ್, ಪ್ರಮುಖರಾದ ರಾಮಾನಾಥ ರಾಯಿ, ವೆಂಕಪ್ಪ ಪೂಜಾರಿ, ಪ್ರಣಾಮ್‌ಕುಮಾರ್, ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಮೊದಲಾದವರಿದ್ದರು. ಜಾಥಾದ ವೇಳೆ ಮಾಸ್ಕ್ ಇಲ್ಲದೆ ಇರುವ ನಾಗರಿಕರಿಗೆ ಮಾಸ್ಕ್ ವಿತರಿಸಲಾಯಿತು.