ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ನೇತೃತ್ವದಲ್ಲಿ ಮಾಸ್ಕ್ ದಿನಾಚರಣೆಯ ನಡಿಗೆ ಕಾರ್ಯಕ್ರಮ ಬಿ.ಜೆ.ಪಿ ಕಚೇರಿಯಿಂದ ನಾರಾಯಣ ಗುರು ವೃತ್ತದವರೆಗೆ ನಡೆಯಿತು.
ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಂಗಪ್ಪ ಬಂಗೇರ, ಜಿಲ್ಲಾ ಮೋರ್ಚಾಗಳ ಡಿಜಿಟಲ್ ಸಂಚಾಲಕರಾದ ಸಂದೇಶ್ ಶೆಟ್ಟಿ, ಪ್ರ.ಕಾರ್ಯದಶಿಯಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ರಮನಾಥ ರಾಯಿ, ಗಣೇಶ್ ರೈ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟು, ಮೋನಪ್ಪ ದೇವಸ್ಯ, ಸುದರ್ಶನ್ ಬಜ, ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಭಾರತಿ ಚೌಟ, ಚಂದ್ರಾವತಿ ಪೊಳಲಿ, ಹಾಗೂ ಕ್ಷೇತ್ರ ಪದಾಧಿಕಾರಿಗಳು, ಕ್ಷೇತ್ರ ಮೋರ್ಚಾಗಳ ಅಧ್ಯಕ್ಷ, ಪ್ರ.ಕಾರ್ಯದಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಹಾಗೂ ವಿವಿಧ ಜವಾಬ್ದಾರಿ ಇರುವ ಪ್ರಮುಖರು, ಜನಪ್ರತಿನಿದಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.