ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಲಿಫ್ಟ್ ಕೈಕೊಟ್ಟು, ಅದರೊಳಗಿದ್ದ ಸರ್ವೆ ಇಲಾಖೆಯ ಮಹಿಳಾ ಸಿಬ್ಬಂದಿಯೋರ್ವರು ಸುಮಾರು ಅರ್ಧ ಗಂಟೆ ಬಾಕಿಯಾದ ಪ್ರಸಂಗ ಮಂಗಳವಾರ ಬೆಳಗ್ಗೆ ನಡೆಯಿತು.
ವಯಸ್ಸಾದವರು, ಅಶಕ್ತರಿಗೆಂದು ನಿರ್ಮಿಸಲಾದ ಮಿನಿ ವಿಧಾನಸೌಧದ ಲಿಫ್ಟ್ ನಲ್ಲಿ ನಿರ್ವಹಣಾ ಸಿಬ್ಬಂದಿ ಇಲ್ಲ. ಆದರೆ ಎರಡು ಮಹಡಿಗೆ ತೆರಳುವ ಈ ಲಿಫ್ಟ್ ಆಗಾಗ ವಿದ್ಯುತ್ ಪೂರೈಕೆ ಇಲ್ಲದೆ ಕೈಕೊಟ್ಟು ಸುದ್ದಿಯಾಗುತ್ತಿತ್ತು. ಆದರೆ ವರ್ಷದಿಂದೀಚೆಗೆ ಆ ಸಮಸ್ಯೆ ಇರಲಿಲ್ಲ. ಮಂಗಳವಾರ ಜನರೇಟರ್ ಚಾಲೂ ಇತ್ತು. ಎಂದಿನಂತೆ ಮಹಿಳಾ ಸಿಬ್ಬಂದಿ ಲಿಫ್ಟ್ ಒಳಗೆ ಹೋದಾಗ ಲಿಫ್ಟ್ ಬಂದ್ ಆಯಿತು. ಮುಂದೇನು ಮಾಡುವುದು ಎಂದು ತಿಳಿಯದೆ ಗಲಿಬಿಲಿಗೊಂಡ ಮಹಿಳೆ, ಸಹೋದ್ಯೋಗಿಗಳ ನೆರವು ಯಾಚಿಸಿದರು. ಅಷ್ಟರಾಗಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಲಿಫ್ಟ್ ತೆರೆಯಲು ಶತಪ್ರಯತ್ನ ನಡೆಸಿದ ಪ್ರಸಂಗವೂ ನಡೆಯಿತು. ಕೊನೆಗೆ ಲಿಫ್ಟ್ ತೆರೆದು ಸಿಬ್ಬಂದಿ ಹೊರಬಂದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…