ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿಯ ಸನಿಹವೇ ಇರುವ ಸಾಧನಾ ರೆಸಿಡೆನ್ಸಿ ಸಂಕೀರ್ಣದಲ್ಲಿರುವ ಹೋಟೆಲ್ ಸಿಲ್ವರ್ ಸೀಫುಡ್ ಫ್ಯಾಮಿಲಿ ರೆಸ್ಟೊರೆಂಟ್ ಸೋಮವಾರದಿಂದ ಎಂದಿನಂತೆ ಗ್ರಾಹಕರ ಸೇವೆಗೆ ಲಭ್ಯ.
ಲಾಕ್ ಡೌನ್ ನಿಂದ ಎರಡೂವರೆ ತಿಂಗಳು ಸರ್ಕಾರದ ಸೂಚನೆಯನ್ವಯ ಬಂದ್ ಆಗಿದ್ದ ರೆಸ್ಟೋರೆಂಟ್ ನಾಳೆಯಿಂದ ಸರ್ಕಾರದ ಸಕಲ ನಿಯಮಗಳನ್ನು ಅನುಸರಿಸಿ, ಶುಚಿ ರುಚಿಯಾದ ಖಾದ್ಯಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಮಾಲೀಕ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಮಾಹಿತಿ ನೀಡಿದ್ದಾರೆ.
2017 ಸೆಪ್ಟೆಂಬರ್ ನಲ್ಲಿ ಆರಂಭಗೊಂಡಿದ್ದ ಸಿಲ್ವರ್ ರೆಸ್ಟೋರೆಂಟ್ ಬಹುಬೇಗನೆ ಜನಮನ್ನಣೆ ಗಳಿಸಿತು. ಇಲ್ಲಿನ ಪಾರ್ಸೆಲ್ ವ್ಯವಸ್ಥೆ ಜನರಿಗೆ ಅನುಕೂಲವಾಗಿದ್ದರೆ, ಕುಟುಂಬ ಸಮೇತ ಬಂದು ಆಹಾರ ಸೇವಿಸಿ ತೆರಳಲು ಪಾರ್ಕಿಂಗ್ ಮೊದಲಾದ ವ್ಯವಸ್ಥೆಗಳು ಜನಮನ್ನಣೆ ಗಳಿಸಿತು. ಸರ್ಕಾರಿ ಕಚೇರಿಗಳಿಗೆ ಬರುವ ನಾನ್ ವೆಜ್ ಪ್ರಿಯರನ್ನು ಮಧ್ಯಾಹ್ನದ ಶುಚಿರುಚಿಯ ಭೋಜನಕ್ಕೆ ಕೈಕುಂಜ ರಸ್ತೆಯೆಡೆ ಹೆಜ್ಜೆ ಹಾಕುವಂತೆ ಸಿಲ್ವರ್ ಮಾಡಿದೆ.
ಕರಾವಳಿ ಮೀನಿನ ಖಾದ್ಯಕ್ಕೆ ವಿಶೇಷತೆ ಹೊಂದಿರುವ ರೆಸ್ಟೋರೆಂಟ್ ಅತ್ಯುತ್ತಮ ಗುಣಮಟ್ಟದ ಫುಡ್ ಐಟಂಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫ್ಯಾಮಿಲಿ-ಮಹಿಳೆಯರಿಗೆ ಪ್ರತ್ಯೇಕ ಕ್ಯಾಬಿನ್, ಟೇಸ್ಟಿಂಗ್ ಹಾಗೂ ಸೋಡಾ ಪುಡಿ ರಹಿತ ತಾಜಾ ಫುಡ್ ಇಲ್ಲಿನ ವೈಶಿಷ್ಟ್ಯ. 2017ರ ಸೆಪ್ಟೆಂಬರ್ ನಿಂದ ಇದುವರೆಗೂ ಗ್ರಾಹಕರು ನೆಚ್ಚಿದ್ದ ಸಿಲ್ವರ್ ಹೋಟೆಲ್, ಲಾಕ್ ಡೌನ್ ನಿಂದಾಗಿ ತೆರೆಯದಿದ್ದಾಗ ಯಾವಾಗ ಓಪನ್ ಆಗುತ್ತದೆ ಎಂದು ನೂರಾರು ಗ್ರಾಹಕರು ದೂರವಾಣಿ ಕರೆ ಮಾಡಿ ಪ್ರಶ್ನಿಸುತ್ತಿದ್ದರು. ಇದು ಗ್ರಾಹಕರು ಹೋಟೆಲ್ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಎಂದು ಹೇಳುವ ವಿಶ್ವನಾಥ್ ಬಂಟ್ವಾಳ, ಇದೀಗ ಸಿಲ್ವರ್ ಹೋಟೆಲ್ ನ ಗ್ರಾಹಕರು, ಮಾಂಸಾಹಾರಿ ತಿನಿಸುಗಳನ್ನು ಇಷ್ಟಪಡುವವರು ಸೋಮವಾರದಿಂದ ಸಿಲ್ವರ್ ಹೋಟೆಲ್ ಗೆ ಆಗಮಿಸಿ, ಖಾದ್ಯವೈವಿಧ್ಯಗಳನ್ನು ಸವಿಯಬಹುದು, ಹಿಂದಿನಂತೆಯೇ ಅತ್ಯುತ್ಕೃಷ್ಟ ಸೇವೆ ನೀಡಲು ಹಾಗೂ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡದೆ ಶುಚಿರುಚಿಯಾದ ತಿನಿಸುಗಳನ್ನು ಒದಗಿಸಲು ಬದ್ಧ ಎಂದು ಹೇಳಿದ್ದಾರೆ.