ಪುಣಚ ಗ್ರಾಮದ ಅಜ್ಜಿನಡ್ಕದಿಂದ ಕಂಬಳಿಮೂಲೆಗೆ ಹೋಗುವ ರಸ್ತೆಯ ಗುಂಪೆ ಎಂಬಲ್ಲಿ ರಸ್ತೆ ಬದಿ ಕುಸಿದಿದೆ. ಪುಣಚ ಗ್ರಾಮದ ಅಜ್ಜಿನಡ್ಕದಿಂದ ಕಂಬಳಿಮೂಲೆ, ಚಂದಳಿಕೆ ಭಾಗಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಹಲವು ಮನೆಗಳು, ಕಲ್ಲಿನ ಕೋರೆಯೂ ಇದೆ. ಪ್ರತಿನಿತ್ಯ ಆಟೋ ರಿಕ್ಷಾ ಸೇರಿದಂತೆ ಮೊದಲಾದ ವಾಹನಗಳು ಸಂಚರಿಸುತ್ತಿದೆ. ಮೊದಲ ಮಳೆಗೆ ಈ ರಸ್ತೆ ಬದಿ ಕುಸಿದು ಬಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಎಸ್ಡಿಪಿಐ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಬದ್ರುದ್ದೀನ್ ಪೈಸಾರಿ, ಕಾರ್ಯದರ್ಶಿಗಳಾದ ಜಬ್ಬಾರ್ ಆಲಂತಡ್ಕ, ಅಬ್ದುಲ್ ಸಹದ್, ವಲಯ ಕಾರ್ಯದರ್ಶಿ ಮುನೀರ್ ಮೂಡಾಯಿಬೆಟ್ಟು, ಸದಸ್ಯರಾದ ಕಮರುದ್ದೀನ್, ಕೆ.ಪಿ ಅಝೀಝ್, ಲತೀಫ್ ಕುಟ್ಟಿತ್ತಡ್ಕ, ನಝೀರ್ ಅಜ್ಜಿನಡ್ಕ ನೇತೃತ್ವದಲ್ಲಿ ನಿಯೋಗವೊಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ದುರಸ್ತಿಗೆ ಒತ್ತಾಯಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…