ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ 5 ಗ್ರಾಮಗಳ ಆಶಾ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಸಹಾಯಕರಿಗೆ ಗೌರವಧನವನ್ನು ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ ಸಂಘದ ವಠಾರದಲ್ಲಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕೊರೋನಾ ಮಹಾಮಾರಿಯ ವಿರುದ್ಧ ದುಡಿಯುತ್ತಿರುವ ಆಶಾ ಕಾರ್ಯಕರ್ತರ ಶ್ರಮ ಶ್ಲಾಘನೀಯ. ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಡಿ ಸಾಮಾಜಿಕ ಅಂತರ ಪಾಲಿಸಿ, ನಮ್ಮ ಪರಿಸರ, ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ದೇಶ ಕೊರೋನಾ ಮುಕ್ತ ದೇಶವಾಗಬೇಕು ಎಂದು ತಿಳಿಸಿದರು.
ಸಂಘದ ಕಾರ್ಯವ್ಯಾಪ್ತಿಯ 22 ಆಶಾ ಕಾರ್ಯಕರ್ತರು ಮತ್ತು 6 ಆರೋಗ್ಯ ಸಹಾಯಕರಿಗೆ ತಲಾ 1500 ರೂಗಳಂತೆ ಗೌರವಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಹಾಲು ಒಕ್ಕೂಟದ ನಿರ್ದೇಶಕ ಬಿ.ಸುಧಾಕರ ರೈ ಬೋಳಂತೂರು, ಸವಿತಾ ಎನ್ ಶೆಟ್ಟಿ, ಉಪವ್ಯವಸ್ಥಾಪಕರಾದ ಎಸ್ ಪ್ರಭಾಕರ್, ವಿಸ್ತರಣಾಧಿಕಾರಿಗಳಾದ ದೇವರಾಜ್ ಎಸ್.ಎನ್, ಜಗದೀಶ ಎ, ಸರೋಜಿನಿ, ಮಾರುಕಟ್ಟೆ ಅಧೀಕ್ಷರಾದ ರವಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್.ಕೆ, ಶಾಖಾ ವ್ಯವಸ್ಥಾಪಕರಾದ ಗೋಪಾಲ.ಕೆ ಉಪಸ್ಥಿತರಿದ್ದರು. ದ.ಕ.ಹಾಲು ಒಕ್ಕೂಟದ ನಿರ್ದೇಶಕರಾದ ಹಾಗೂ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾದ ಬಿ.ಸುಧಾಕರ ರೈ ಬೋಳಂತೂರು ಸ್ವಾಗತಿಸಿದರು. ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.