ಬಂಟ್ವಾಳ ತಾಲೂಕಿನ ಮಜಿ ವೀರಕಂಭದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯನ್ನು ಆರಂಭಿಸುವ ಕುರಿತು ಪೋಷಕರ ಸಮಾಲೋಚನಾ ಸಭೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಈಗ ಶಾಲೆ ಪ್ರಾರಂಭ ಮಾಡುವುದು ಸೂಕ್ತವಲ್ಲ ಅರ್ಧವಾರ್ಷಿಕ ರಜೆಯ ನಂತರವೇ ಶಾಲಾ ಪ್ರಾರಂಭ ಮಾಡುವುದು ಸೂಕ್ತವೆಂದು ಪೋಷಕರು ಅಭಿಪ್ರಾಯಪಟ್ಟರು. ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಮೆಟಿಲ್ಡಾ ಲೋಬೋ ಮಾತನಾಡಿ, ಇಲಾಖಾ ನಿಯಮದಂತೆ ಪೋಷಕರ ಒಟ್ಟು ಅಭಿಪ್ರಾಯವನ್ನು ದಾಖಲಾತಿ ಮಾಡಿ ಸರಕಾರಕ್ಕೆ ತಿಳಿಸುವ ಸಲುವಾಗಿ ಸಭೆ ಕರೆಯಲಾಗಿದೆ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಶೇಖರ್ ಉಪಸ್ಥಿತರಿದ್ದರು, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತಾ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶಕುಂತಲಾ, ಸಿಸಿಲಿಯ, ಅನುಷಾ, ಮುರ್ಷಿದಾ ಬಾನು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನ ಮೈರ ಸಹಕರಿಸಿದರು.