ಬಂಟ್ವಾಳ ತಾಲೂಕಿನಾದ್ಯಂತ ಬುಧವಾರ ದಿನವಿಡೀ ಆಗಾಗ್ಗೆ ಗಾಳಿ, ಮಳೆ ಗುಡುಗು ಸಿಡಿಲಿನೊಂದಿಗೆ ಸುರಿಯುತ್ತಿದ್ದು, ವಾತಾವರಣ ಕೂಲ್ ಆಗಿದೆ. ಇದೇ ವೇಳೆ ಸರಪಾಡಿ ಬೀಯಪಾದೆಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‌ನ ಮೂರು ಕಂಬಗಳು ಧರೆಗುರುಳಿದವು. ನೀರಿನ ಯೋಜನೆಗೆ ಪ್ರತ್ಯೇಕ ವಿದ್ಯುತ್ ಲೈನ್‌ನ ಕಾಮಗಾರಿ ನಡೆಯುತ್ತಿದ್ದು, ಹೊಸದಾಗಿ ಅಳವಡಿಸಿದ ಕಂಬಗಳು ಮಳೆಗೆ ಧರೆಗುರುಳಿವೆ. ಘಟನೆಯಿಂದ ಸಾಮಾನ್ಯ ವಿದ್ಯುತ್ ಪೂರೈಕೆ ಸೇರಿದಂತೆ ಇತರ ಯಾವುದಕ್ಕೂ ಕೂಡ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)