ಕಲ್ಲಡ್ಕ

ತಮ್ಮದೇ ಮನೆಗೆ ಮರಳುತ್ತಿರುವವರನ್ನು ಅಸ್ಪೃಶ್ಯರಂತೆ ನೋಡುವುದು ಸರಿಯೇ?

www.bantwalnews.com Editor: Harish Mambady For Advertisements contact: 9448548127

ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ನಮ್ಮವರ ನೋವಿಗೆ ಸ್ಪಂದಿಸುವುದು ಅಗತ್ಯ. ನೋವು ದುಃಖದಲ್ಲಿರುವ ನಮ್ಮವರೇ ಆಗಿರುವ ಹೊರರಾಜ್ಯದ ಬಂಧುಗಳ ಬಗ್ಗೆ ಕೆಟ್ಟದಾಗಿ ಮಾತನಾಡದಿರೋಣ. ಅವರ ಜೊತೆ ಕೀಳಾಗಿ ವರ್ತಿಸದಿರೋಣ. ಈ ಜಿಲ್ಲೆಯ ಜನರು ಸಹೃದಯಿಗಳು, ಕಷ್ಟಕ್ಕೆ ಸ್ಪಂದಿಸುವವರು, ಬುದ್ಧಿವಂತರು ಎಂಬುದನ್ನು ತೋರಿಸಲು ದೇವರೇ ಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಜಾಹೀರಾತು

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಪ್ರದೇಶಕ್ಕೆ ಎಲ್ಲ ರಾಜ್ಯಗಳಿಂದಲೂ ಜನ ಪ್ರವಾಹದೋಪಾದಿಯಂತೆ ಬರುತ್ತಿದ್ದಾರೆ. ಈ ಲಕ್ಷಾಂತರ ಜನ (ಮಹಾರಾಷ್ಟ್ರವೂ ಸೇರಿ) ಬಂದಾಗಲೆಲ್ಲಾ ಉತ್ತರ ಪ್ರದೇಶದಲ್ಲಿ ಸಂತೋಷದಿಂದ ತನ್ನೆರಡೂ ಕೈಗಳಿಂದ ಅವರನ್ನು ಸ್ವಾಗತಿಸುತ್ತಿದ್ದಾರೆ. ಆದರೆ ನಾವು ಅಲ್ಲಿಂದ ಬರುವವರನ್ನು ಸಂಶಯದಿಂದ ಯಾಕೆ ನೋಡುತ್ತೇವೆ ಎಂದು ಪ್ರಶ್ನಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ, ಸಹೃದಯಿ, ಕಷ್ಟಕ್ಕೆ ಸ್ಪಂದಿಸುವ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಕಳೆದ 3 ತಿಂಗಳಿಂದ ನಮ್ಮ ಜನರು ದೇಶ-ವಿದೇಶಗಳಲ್ಲಿ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಜನ ಕೆಲಸ ಕಳೆದುಕೊಂಡು, ಇನ್ನು ಕೆಲವರು ಕೊರೋನ ವ್ಯಾಪಿಸುತ್ತಿರುವಾಗ ನಮ್ಮ ಊರಲ್ಲಿ ಹೆಚ್ಚಿನ ರಕ್ಷಣೆ ಸಿಗಬಹುದೆಂಬ ಆಶಯದಿಂದ ತಮ್ಮ ಮನೆಗೆ ಮರಳಿದ್ದಾರೆ. ಇನ್ನಷ್ಟು ಜನರು ಬರಲು ತಯಾರಿ ನಡೆಸುತ್ತಿದ್ದಾರೆ. ಕಳೆದ 3 ತಿಂಗಳಿಂದ ಕೆಲಸವಿಲ್ಲದೆ ಕೈಯಲ್ಲಿ ಇದ್ದ ಹಣವನ್ನು ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ. ಮುಂಬೈಯಲ್ಲಿನ ವ್ಯವಸ್ಥೆ ಮತ್ತೆ ಸಹಜತೆಗೆ ಮರಳಲು ತುಂಬಾ ಸಮಯ ಹಿಡಿಯಬಹುದು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ  ಹೇಗಿರಬಹುದು ಊರಿಗೆ ಬರುತ್ತಿರುವ ಆ ನಮ್ಮ ಬಂಧುಗಳನ್ನು ಬರುವುದು ಬೇಡ ಅನ್ನುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಮನೆಗೆ ಮರಳುತ್ತಿರುವವರನ್ನು ಅಸ್ಪೃಶ್ಯ ಭಾವದಿಂದ ನೋಡುವುದು ಸರಿಯಲ್ಲ. ಮುಂಬೈಗೆ ಹೋಗಿ ಅಲ್ಲಿ ಆ ಮಹಾವಾಣಿಜ್ಯ ನಗರದಲ್ಲಿ ಅಥವಾ ಇಡೀ ಮಹಾರಾಷ್ಟ್ರದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಚಲನಚಿತ್ರ ರಂಗದಲ್ಲಿ ಅವರು ರಾರಾಜಿಸಿ ನಮ್ಮ ಜಿಲ್ಲೆಗೂ ಗೌರವ ತಂದಿತ್ತಿದ್ದಾರೆ. ಇಲ್ಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮ ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಚಟುವಟಿಕೆಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದವರು ಅವರೇ. ಜಿಲ್ಲೆಯಲ್ಲಿ ನಡೆಯುವ ಬ್ರಹ್ಮಕಲಶ, ಜೀರ್ಣೋದ್ಧಾರ, ಗುಡಿ, ಗೋಪುರಗಳ ಕಾರ್ಯಗಳಿಗಾಗಿ ಪ್ರತಿ ವರ್ಷ ನೂರಾರು ಕೋಟಿ ಅವರು ದುಡಿದ ಹಣವನ್ನು ನೀಡಿದ್ದಾರೆ.  ಇದರಿಂದ ಇಲ್ಲಿಯ ನಮ್ಮ ಎಲ್ಲ ರೀತಿಯ ಜನಜೀವನ ಚೆನ್ನಾಗಿ ನಡೆದುಕೊಂಡು ಬಂದಿದೆ. ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ ಇದರಿಂದ ನಮ್ಮ ಕುಟುಂಬಗಳೂ ಸಶಕ್ತವಾಗಿದೆ ಎಂದು ಭಟ್ ನೆನಪಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts