ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳಿನಿಂದ ಬಂದ್ ಆಗಿದ್ದ ಬಿ.ಸಿ.ರೋಡಿನ ಚಟುವಟಿಕೆಗಳೆಲ್ಲವೂ ಈಗ ಗರಿಗೆದರಿದೆ. ಅಂಗಡಿ, ಮುಂಗಟ್ಟುಗಳು ಒಂದೊಂದಾಗಿ ಇಡೀ ದಿನ ತೆರೆಯಲು ಆರಂಭಗೊಂಡಿದೆ. ಜನಸಂಚಾರ ಕಾಣಿಸುತ್ತಿದೆ. ಇದೇ ವೇಳೆ ಹೋಟೆಲ್ ಉದ್ಯಮವೂ ನಿಧಾನವಾಗಿ ಗ್ರಾಹಕರ ಸೇವೆಗೆ ಒಡ್ಡಿಕೊಳ್ಳುತ್ತಿವೆ. ಈಗಾಗಲೇ ಕೆಲವು ಹೋಟೆಲ್ ಗಳು ಪಾರ್ಸೆಲ್ ಸರ್ವೀಸ್ ಆರಂಭ ಮಾಡಿದ್ದವು. ಆದರೆ ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯ ತೋರಿದವರು ವಿರಳ. ಇಂಥ ಹೊತ್ತಿನಲ್ಲೇ ಬಿ.ಸಿ.ರೋಡಿನ ಪ್ರಸಿದ್ಧ ಪದ್ಮಾ ಕಾಂಪ್ಲೆಕ್ಸ್ ನಲ್ಲಿದ್ದ ಹೋಟೆಲ್ ಪದ್ಮಾ ಡೀಲಕ್ಸ್ ಹೊಸ ಆಡಳಿತದೊಂದಿಗೆ ಗ್ರಾಹಕರ ಸೇವೆಗೆ ಸಜ್ಜಾಗಿದೆ. ಈಗಾಗಲೇ ಹಲವು ಉದ್ಯಮಗಳೊಂದಿಗೆ ಯಶಸ್ವಿಯಾಗಿರುವ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಅವರು ಪದ್ಮಾ ಡೀಲಕ್ಸ್ ಸಸ್ಯಾಹಾರಿ ಹೋಟೆಲ್ ನಡೆಸಲಿದ್ದಾರೆ. ಉಷಾ ಜ್ಯುವೆಲರ್ಸ್, ಸಾಧನಾ ರೆಸಿಡೆನ್ಸಿ, ಸಿಲ್ವರ್ ಹೋಟೆಲ್ ಮೂಲಕ ಬಿ.ಸಿ.ರೋಡಿನಲ್ಲಿ ಯಶಸ್ವಿ ಉದ್ಯಮಿಯಾಗಿ ಗಮನ ಸೆಳೆದಿರುವ ವಿಶ್ವನಾಥ ಬಂಟ್ವಾಳ ಹೋಟೆಲ್ ಆರಂಭಿಸಿದ ಹೊತ್ತಿನಲ್ಲಿ ಲಾಕ್ ಡೌನ್ ಸಂಕಷ್ಟ. ಆದರೆ ಗ್ರಾಹಕರಿಗೆ ಉತ್ತಮವಾದ, ಶುಚಿ, ರುಚಿಯಾದ ಪೂರ್ಣ ಸಸ್ಯಾಹಾರಿಯಾಗಿರುವ ಗುಣಮಟ್ಟದ ಆಹಾರವನ್ನು ಸರ್ಕಾರ ವಿಧಿಸಿರುವ ಎಲ್ಲ ನಿಯಮಗಳನ್ನು ಪಾಲಿಸಿ ಒದಗಿಸಲು ವಿಶ್ವನಾಥ ಬಂಟ್ವಾಳ ಸಾರಥ್ಯದ ಟೀಂ ಸಜ್ಜಾಗಿ ನಿಂತಿದೆ.
ಈಗಾಗಲೇ ಹೋಟೆಲ್ ಒಳವಿನ್ಯಾಸ ಸಂಪೂರ್ಣ ಬದಲಾಗಿದೆ. ಫ್ಯಾಮಿಲಿ ಕೊಠಡಿಯೊಂದು ಪ್ರತ್ಯೇಕವಿದೆ. ಮಧ್ಯಾಹ್ನ ಮಿತದರದ ಊಟ ಗ್ರಾಹಕರಿಗೆ ಇಷ್ಟವಾಗಿದೆ. ವೈವಿಧ್ಯಮಯ ತಿಂಡಿ, ತಿನಸುಗಳನ್ನು ಹೋಟೆಲ್ ಒದಗಿಸುತ್ತಿದೆ. ನಾವು ಪ್ರತಿದಿನವೂ ಬಗೆಬಗೆಯ ತಿನಿಸುಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುತ್ತಾರೆ ವಿಶ್ವನಾಥ ಬಂಟ್ವಾಳ್.
ಪಾತ್ರೆ ತೊಳೆಯಲು ಬಿಸಿನೀರು: ನೀವು ಕುಡಿದ ಕಾಫಿ ಲೋಟ, ತಿಂಡಿ, ಊಟದ ತಟ್ಟೆಯನ್ನು ಹಾಗೆಯೇ ನೀರಿನಲ್ಲಿ ತೊಳೆದಿಡುವುದಲ್ಲ, ಬಿಸಿನೀರಿನಲ್ಲಿ ನಾವು ಶುಚಿಗೊಳಿಸುತ್ತೇವೆ, ತೊಳೆದ ಮೇಲೆ ಶುಚಿಯಾಗಿಟ್ಟುಕೊಳ್ಳುತ್ತೇವೆ. ಗ್ರಾಹಕರಿಗೆ ಬಿಸಿಬಿಸಿ ನೀರೇ ಕೊಡುತ್ತೇವೆ. ಪ್ರವೇಶಿಸುವಾಗ ಸ್ಯಾನಿಟೈಸರ್ ಒದಗಿಸಲಾಗಿದೆ. ಆರೋಗ್ಯ ಜಾಗೃತಿಯನ್ನೂ ಇಲ್ಲಿ ನೀಡಲಾಗುತ್ತಿದೆ ಎನ್ನುತ್ತಾರೆ ಮಾಲೀಕ ವಿಶ್ವನಾಥ ಬಂಟ್ವಾಳ್.
ಶೀಘ್ರ ಚಾಟ್ಸ್ ಆರಂಭ: ಶೀಘ್ರದಲ್ಲೇ ಚಾಟ್ಸ್ ಅನ್ನು ಆರಂಭಿಸಲಿದ್ದೇವೆ. ಅದಕ್ಕೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಗ್ರಾಹಕರಿಗೆ ಕುಳಿತು ತಿನ್ನಲು ವ್ಯವಸ್ಥೆ ಇದೆ. ಬೇಕರಿಯನ್ನೂ ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನು ಅವರು ನೀಡಿದರು.